ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ವೇಗಿ ಜೂಲನ್‌ ಗೋಸ್ವಾಮಿ ನನಗೆ ಸ್ಫೂರ್ತಿ ಎಂದ ಪಾಕಿಸ್ತಾನ ಬೌಲರ್‌: ಬಾಲ್‌ಗರ್ಲ್‌ ಕ್ರಿಕೆಟರ್‌ ಆದ ಕತೆ

Last Updated 4 ಜುಲೈ 2017, 9:54 IST
ಅಕ್ಷರ ಗಾತ್ರ

ಬೆಂಗಳೂರು: ಭಾರತ ಮಹಿಳಾ ಕ್ರಿಕೆಟ್‌ ತಂಡದ ವೇಗದ ಬೌಲರ್‌ ಜೂಲನ್‌ ಗೋಸ್ವಾಮಿ ಅವರ ಆಟವೇ ನನಗೆ ಸ್ಫೂರ್ತಿ ಎಂದು ಪಾಕಿಸ್ತಾನ ತಂಡದ ಅಲ್ರೌಂಡರ್‌ ಕೈನತ್‌ ಇಮ್ತಿಯಾಜ್‌ ಹೇಳಿಕೊಂಡಿದ್ದಾರೆ.

‘ಪಾಕಿಸ್ತಾನದಲ್ಲಿ 2005ರ ಏಷಿಯಾ ಕಪ್‌ ಕ್ರಿಕೆಟ್‌ ಪಂದ್ಯಾವಳಿ ನಡೆದಿತ್ತು. ನಾನು ಕ್ರೀಡಾಂಗಣದ ಬೌಂಡರಿಗೆರೆಯಲ್ಲಿ ಬಾಲ್‌ ಎತ್ತಿಕೊಡುತ್ತಿದ್ದೆ. ಆ ಸಮಯದಲ್ಲಿ ವಿಶ್ವದ ವೇಗದ ಬೌಲರ್‌ ಎನಿಸಿದ್ದ ಜೂಲನ್‌ ಗೋಸ್ವಾಮಿಯನ್ನು ಕಂಡು ಆಕರ್ಷಿತಳಾದೆ. ಬಳಿಕ ಕ್ರಿಕೆಟ್‌ ನನ್ನ ವೃತ್ತಿಯನ್ನಾಗಿ ಆಯ್ದುಕೊಳ್ಳಬೇಕು ಎನಿಸಿತು. ಅದರಲ್ಲೂ ವೇಗದ ಬೌಲರ್‌ ಆಗಿಯೇ ಗುರುತಿಸಿಕೊಳ್ಳಬೇಕು ಎಂಬ ತೀರ್ಮಾನ ಕೈಗೊಂಡೆ. ಅದಾಗಿ 12ವರ್ಷಗಳು ಕಳೆದಿವೆ. ಈಗ ನನಗೆ ಸ್ಫೂರ್ತಿಯಾದವರ ಜತೆಯಲ್ಲಿಯೇ 2017ರ ವಿಶ್ವಕಪ್‌ ಪಂದ್ಯವಾಳಿಯಲ್ಲಿ ಆಡುತ್ತಿದ್ದೇನೆ. ಇದು ಅತ್ಯಂತ ಹೆಮ್ಮೆಯ ಕ್ಷಣ’ ಎಂದು ಇಮ್ತಿಯಾಜ್‌ ಅವರು ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಜತೆಗೆ ಗೋಸ್ವಾಮಿ ಅವರ ಜತೆಯಾಗಿರುವ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ.

ಭಾನುವಾರ ನಡೆದ ವಿಶ್ವಕಪ್‌ ಪಂದ್ಯದಲ್ಲಿ ಭಾರತ ಪಾಕಿಸ್ತಾನದ ಎದುರು 95ರನ್‌ ಅಂತರದ ಜಯಸಾಧಿಸಿತ್ತು. ಪಂದ್ಯದ ಬಳಿಕ ಇಮ್ತಿಯಾಜ್‌ ಗೋಸ್ವಾಮಿ ಅವರ ಬಗ್ಗೆ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT