ಭಾನುವಾರ, ಡಿಸೆಂಬರ್ 15, 2019
17 °C

ನಾಗರಿಕರಿಂದ ಮೌನ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಗರಿಕರಿಂದ ಮೌನ ಪ್ರತಿಭಟನೆ

ಉಳ್ಳಾಲ: ಶಾಂತಿ, ಸೌಹಾರ್ದದಿಂದ ಇರುವ ಪ್ರದೇಶದಲ್ಲಿ ವೈನ್ ಶಾಪ್ ತೆರೆ ಯುವ ಮೂಲಕ ಅಶಾಂತಿಯ ವಾತಾವ ರಣ ಸೃಷ್ಟಿಯಾಗಲಿದೆ.  ವೈನ್‌ಶಾಪ್‌ಗೆ ಅನುಮತಿ ನೀಡಿದ್ದೇ ಆದಲ್ಲಿ ನಗರಸಭೆ ಕಚೇರಿ ಎದುರು ಉಗ್ರ ಪ್ರತಿಭಟನೆ ಹಮ್ಮಿ ಕೊಳ್ಳುತ್ತೇವೆ ಎಂದು ಚೆಂಬುಗುಡ್ಡೆಯ ನೂರುಲ್ ಹುದಾ ಜುಮಾ ಮಸೀದಿ ಅಧ್ಯಕ್ಷ ಹನೀಫ್ ಹೇಳಿದರು.

ಬಾರ್ ಮತ್ತು ವೈನ್ ಶಾಪ್‌ಗೆ ಅನುಮತಿ ನೀಡದಂತೆ ಆಗ್ರಹಿಸಿ ಚೆಂಬುಗುಡ್ಡೆ ನಾಗರಿಕರಿಂದ ಸೋಮವಾರ ಹಮ್ಮಿಕೊಳ್ಳಲಾಗಿದ್ದ  ಮೌನ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮೌನ ಪ್ರತಿಭಟನೆ ಹಮ್ಮಿಕೊಳ್ಳುವ ಮೂಲಕ ಎಚ್ಚರಿಕೆಯನ್ನು ನೀಡಿದ್ದೇವೆ. ಸೌಹಾರ್ದದ ವಾತಾವರಣವನ್ನು ಹಾಳು ಮಾಡಲು ಪ್ರಯತ್ನಿಸಬೇಡಿ ಎಂದು ಎಚ್ಚರಿಸಿದರು.

ಜುಮಾ ಮಸೀದಿ ಕಾರ್ಯದರ್ಶಿ ಮಹಮ್ಮದ್ ಸಲಾಂ ಮಾತನಾಡಿ, ಮಸೀ ದಿಯ ಮೂರು ಮೀಟರ್ ವ್ಯಾಪ್ತಿಯಲ್ಲೆ ವೈನ್ ಶಾಪ್ ಗೆ ಜಾಗ ಗುರುತಿಸಿರುವುದು ಖಂಡನೀಯ. ರಸ್ತೆಯುದ್ದಕ್ಕೂ ಧಾರ್ಮಿಕ ಕೇಂದ್ರಗಳು, ಶೈಕ್ಷಣಿಕ ಸಂಸ್ಥೆಗಳು ಕಾರ್ಯಾಚರಿಸುತ್ತಿದೆ.

ಈ ಕುರಿತು ಕಮೀಷನರ್, ಜಿಲ್ಲಾಧಿಕಾರಿ, ನಗರಸಭೆ ಅಧ್ಯಕ್ಷರು, ಅಬಕಾರಿ ಇಲಾಖೆಗೆ ದೂರು ಸಲ್ಲಿಸಲಾಗಿದೆ. ಆದರೆ ಯಾವುದೇ ಸ್ಪಂದನೆ ದೊರೆಯದ್ದರಿಂದ ಮೌನ ಪ್ರತಿಭ ಟನೆ ಹಮ್ಮಿಕೊಂಡಿದ್ದೇವೆ. ಇನ್ನಾದರೂ ಸ್ಥಳೀಯಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇಮ್ತಿಯಾಝ್ ಅಬ್ಬಾಸ್ , ನಗರ ಸಭೆ ಸದಸ್ಯರಾದ ಬಾಝಿಲ್ ಡಿಸೋಜ, ಭಾರತಿ, ಆದಂ, ಫಾರೂಕ್ ಚೆಂಬು ಗುಡ್ಡೆ, ಎಂ.ಸಿ. ಖಾದರ್ ಚೆಂಬುಗುಡ್ಡೆ ಯು.ಕೆ. ಬಾವ ಪಿಲಾರ್, ಹನೀಫ್ ದಾರಂದಬಾಗಿಲು, ಸಜಾದ್ ಚೆಂಬು ಗುಡ್ಡೆ, ಅಶ್ರಫ್, ಜೆರಿ ಮೊಂತೇರೊ ಚೆಂಬುಗುಡ್ಡೆ, ಅಂತೋನಿ ಡಿಸೋಜ ಚೆಂಬುಗುಡ್ಡೆ, ನಾಗೇಶ್ ಕೆರೆಬೈಲು, ಗಣೇಶ್, ನಾಗೇಶ್, ಸುರೇಶ್, ಅಶ್ರಫ್, ಸತೀಶ್, ಕೆರೆಬೈಲು ಅಝರ್, ನೌಷಾದ್, ತೌಸೀಫ್, ಇದ್ದರು.

‘ನಾವಾಗಿ ಕೊಡುವುದಿಲ್ಲ’

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ನಗರಸಭೆ ಅಧ್ಯಕ್ಷ ಹುಸೈನ್ ಕುಂಞಿಮೋನು ಮಾತನಾಡಿ, ವಾರದ ಹಿಂದೆ  ಅರ್ಜಿ ಕೈ ಸೇರಿದೆ. ಚೆಂಬುಗುಡ್ಡೆಯಂತಹ ಪ್ರದೇಶದಲ್ಲಿ ವೈನ್ ಶಾಪ್‌ಗೆ ನಗರಸಭೆಯಿಂದ ಯಾವುದೇ ಬೆಂಬಲವಿಲ್ಲ. ನಗರಸಭೆಯಿಂದ ಅನುಮತಿಯನ್ನೂ ನೀಡುವುದಿಲ್ಲ. ಬೇರೆಯವರನ್ನು ಕೊಡಲು ಬಿಡುವುದಿಲ್ಲ. ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸುತ್ತೇವೆ. ಈ ಕುರಿತು ಸಚಿವರ ಗಮನಕ್ಕೆ ಇಂದು ತರಲಾಗಿದೆ ಎಂದರು.

* * 

ವೈನ್ ಶಾಪ್ ತೆರೆದಲ್ಲಿ ಉಳ್ಳಾಲ ನಗರಸಭೆ ಕಚೇರಿ ಎದುರು ಕುಳಿತು ಉಗ್ರ ರೀತಿಯಲ್ಲಿ ಪ್ರತಿಭಟನೆ ಮತ್ತು ಅಹೋರಾತ್ರಿ ಧರಣಿ ಕುಳಿತುಕೊಳ್ಳಲಾಗುವುದು.

ಹನೀಫ್

ನೂರುಲ್ ಹುದಾ ಜುಮಾ ಮಸೀದಿ ಅಧ್ಯಕ್ಷ

ಪ್ರತಿಕ್ರಿಯಿಸಿ (+)