ಬುಧವಾರ, ಡಿಸೆಂಬರ್ 11, 2019
24 °C

47ರ ಮಾಧವನ್‌ಗೆ ಲಕ್ಷ ದಾಟಿದ ಲೈಕ್

Published:
Updated:
47ರ ಮಾಧವನ್‌ಗೆ ಲಕ್ಷ ದಾಟಿದ ಲೈಕ್

'ರೆಹನಾ ಹೇ ತೇರೆ ದಿಲ್ ಮೆ' ಮೂಲಕ ಬಾಲಿವುಡ್‌ನಲ್ಲೂ ಕಾಲೂರಿದ್ದ ತಮಿಳು ನಟ ಮಾಧವನ್ ದೀರ್ಘಕಾಲದ ಬಳಿಕ ಸುದ್ದಿಯಾಗಿದ್ದಾರೆ. ಇತ್ತೀಚೆಗೆ ಸ್ನಾನವಾದ ತಕ್ಷಣ ತೆಗೆದ ಸೆಲ್ಫಿಯೊಂದನ್ನು ಮಾಧವನ್ ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್ ಮಾಡಿದ್ದೇ ತಡ ಒಂದೇ ದಿನದಲ್ಲಿ ಬರೋಬ್ಬರಿ ಒಂದು ಲಕ್ಷ ಮಂದಿ ಆ ಫೋಟೊಗೆ ಲೈಕ್ ಒತ್ತಿದ್ದಾರೆ. ಲೈಕ್ ಒತ್ತಿದವರಲ್ಲಿ ಹುಡುಗಿಯರ ಸಂಖ್ಯೆಯೇ ಜಾಸ್ತಿಯಿದೆ.

ಹಾಟ್ ಲುಕ್‌ನಲ್ಲಿರುವ ಮಾಧವನ್ ಸೆಲ್ಫಿಗೆ ಎರಡು ಸಾವಿರಕ್ಕೂ ಹೆಚ್ಚು ಕಮೆಂಟ್‌ಗಳು ಬಂದಿದ್ದು, ಒಬ್ಬ ಅಭಿಮಾನಿಯಂತೂ 'ಮಾಧವನ್ ಹಾಟ್‌ನೆಸ್‌ನಿಂದ ನನ್ನ ಫೋನೇ ಒಡೆದುಹೋಗುತ್ತಿದೆ' ಎಂದಿದ್ದಾರೆ.

ತಮ್ಮ ಫೋಟೊ ಇಷ್ಟೊಂದು ವೈರಲ್ ಆಗಿರುವ ಬಗ್ಗೆ ಮಾಧವನ್ ಅವರಿಗೇ ಅಚ್ಚರಿಯಾಯಿತಂತೆ. ಅಂದ ಹಾಗೆ ನಮ್ಮ ಈ ಹಾಟ್ ಮಾಧವನ್‌ಗೆ ಈಗ ಬರೀ 47 ವರ್ಷ.

ಐವತ್ತಕ್ಕಿನ್ನೂ ಮೂರೇ ವರ್ಷ ಬಾಕಿ ಇರುವ ಮಾಧವನ್ ಫಿಟ್‌ನೆಸ್ ರಹಸ್ಯವೇನು ಗೊತ್ತಾ? ದಿನಕ್ಕೆ ಮೂರು ಬಾರಿ ಊಟ, ಪ್ರತಿ ತುತ್ತನ್ನೂ ಅರವತ್ತು ಬಾರಿ ಅಗಿದು ತಿನ್ನುತ್ತಾರಂತೆ. ದಿನದ ಇಪ್ಪತ್ತನಾಲ್ಕು ಗಂಟೆಗಳಲ್ಲಿ ಇಪ್ಪತ್ತು ನಿಮಿಷ ಮೌನಕ್ಕೆ ಮೀಸಲು.

ಮನಸ್ಸು ಉಲ್ಲಾಸದಿಂದ ಇದ್ದರೆ ದೇಹವೂ ಉಲ್ಲಾಸವಾಗಿರುತ್ತದೆ ಅನ್ನೋದು ಮಾಧವನ್ ಚಿಂತನೆ. ದಿನಕ್ಕೆ ನಾಲ್ಕು ಬಾರಿ ವ್ಯಾಯಾಮ ಮಾಡಿ ಎಂದೂ ಮಾಧವನ್ ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಫಿಟ್‌ನೆಸ್ ಟಿಪ್ಸ್ ನೀಡಿದ್ದಾರೆ. ಅಂದ ಹಾಗೆ ಮಾಧವನ್ ತಮ್ಮ ಮುಂದಿನ ಚಿತ್ರ 'ವಿಕ್ರಂ ವೇದ' ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ.

ಪ್ರತಿಕ್ರಿಯಿಸಿ (+)