ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಟ್ಟೆ ಕರಗಿಸಿದವರಿಗೆ ಮಾತ್ರ ಬಡ್ತಿ!

ಐಪಿಎಸ್‌ ಅಧಿಕಾರಿಗಳ ಕರಡು ಸೇವಾ ನಿಯಮಗಳು ಅಂತಿಮ
Last Updated 5 ಜುಲೈ 2017, 20:13 IST
ಅಕ್ಷರ ಗಾತ್ರ

ನವದೆಹಲಿ: ಐಪಿಎಸ್‌ ಅಧಿಕಾರಿಗಳೇ, ಬಡ್ತಿ ಬೇಕೇ? ಹಾಗಿದ್ದರೆ ಹೊಟ್ಟೆ ಕರಗಿಸಿ...
–ಇಂತಹದ್ದೊಂದು ಆದೇಶ ಕೇಂದ್ರ ಸರ್ಕಾರದಿಂದ ಬರುವ ಎಲ್ಲ ಸಾಧ್ಯತೆ ಇದೆ.

ಒಂದು ವೇಳೆ ಈ ಆದೇಶ ಜಾರಿಗೆ ಬಂದರೆ, ಬಡ್ತಿ ಪಡೆದು ಉನ್ನತ ಹುದ್ದೆಗೇರುವ ಕನಸು ಕಾಣುತ್ತಿರುವ ಸ್ಥೂಲ ಕಾಲದ ಐಪಿಎಸ್‌  ಅಧಿಕಾರಿಗಳು, ತಮ್ಮ ಕನಸನ್ನು ನನಸು ಮಾಡಲು ತೂಕ ಇಳಿಸಿಕೊಳ್ಳಲೇ ಬೇಕು.

ಬೊಜ್ಜು ಹೊಂದಿಲ್ಲದ,  ದೈಹಿಕವಾಗಿ ಸದೃಢರಾಗಿರುವ ಅಧಿಕಾರಿಗಳಿಗೆ ಮಾತ್ರ ಬಡ್ತಿ ನೀಡಬೇಕು ಎಂಬ  ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ.

‘ಐಪಿಎಸ್‌ ಅಧಿಕಾರಿಗಳು ವಿವಿಧ ಹಂತಗಳಿಗೆ ಬಡ್ತಿ ಹೊಂದಬೇಕಾದರೆ ಅವರು ದೈಹಿಕವಾಗಿ ಸದೃಢರಾಗಿರುವುದನ್ನು ಕಡ್ಡಾಯಗೊಳಿಸಬೇಕು’ ಎಂದು ಗೃಹ ಸಚಿವಾಲಯ ಶಿಫಾರಸು ಮಾಡಿದೆ.

ಈ ಶಿಫಾರಸನ್ನು ಅಳವಡಿಸಿಕೊಳ್ಳುವುದಕ್ಕಾಗಿ ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯವು ಕರಡು ಸೇವಾ ನಿಯಮಗಳನ್ನು ಅಂತಿಮಗೊಳಿಸಿದ್ದು, ಈ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.

ಸದ್ಯ ಜಾರಿಯಲ್ಲಿರುವ ನಿಯಮಗಳಲ್ಲಿ ಐಪಿಎಸ್‌ ಅಧಿಕಾರಿಗಳಿಗೆ ಬಡ್ತಿ ನೀಡುವ ವಿಚಾರದಲ್ಲಿ ದೈಹಿಕ ಸದೃಢತೆಯ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ. ಪ್ರಸ್ತುತ, ವಿವಿಧ ಹಂತಗಳಿಗೆ ಬಡ್ತಿ ಪಡೆಯಬೇಕಾದರೆ ಅಧಿಕಾರಿಗಳು ಒಂದು ಹಂತದಲ್ಲಿ ನಿರ್ದಿಷ್ಟ ವರ್ಷಗಳ ಸೇವೆ ಸಲ್ಲಿಸಬೇಕು. ಕೇಂದ್ರ ಶಸಸ್ತ್ರ ಪೊಲೀಸ್‌ ಪಡೆಯಲ್ಲಿ ಈಗಾಗಲೇ ಈ ನಿಯಮ ಜಾರಿಯಲ್ಲಿದೆ ಎಂದು ಗೃಹ ಸಚಿವಾಲಯ ಶಿಫಾರಸಿನಲ್ಲಿ ಹೇಳಿದೆ.

ಇಷ್ಟು ಮಾತ್ರವಲ್ಲದೇ,  ಬಡ್ತಿ ಬಯಸುವ ಅಧಿಕಾರಿಗಳು ಕಾರ್ಯಾಚರಣೆ ಕ್ಷೇತ್ರಗಳಾದ ಗುಪ್ತಚರ, ಆರ್ಥಿಕ ಅಪರಾಧಗಳು ಮತ್ತು ಸೈಬರ್‌ ಅಪರಾಧಗಳು, ಅತಿ ಗಣ್ಯರ ಅಥವಾ ಕೈಗಾರಿಕಾ ಭದ್ರತೆ, ಗಲಭೆ ನಿಗ್ರಹ ಮತ್ತು  ಭಯೋತ್ಪಾದನೆ ನಿಗ್ರಹ ವಿಚಾರಗಳಲ್ಲಿ ಅಧಿಕಾರಿಗಳು ಪರಿಣತಿ ಹೊಂದಿರಬೇಕು.

ಐಪಿಎಸ್‌ ಅಧಿಕಾರಿಗಳು ನಿಗದಿತ ಸಮಯದಲ್ಲಿ ಪ್ರೊಬೇಷನರಿ ಅವಧಿಯನ್ನು (2 ವರ್ಷಗಳು) ಪೂರ್ಣಗೊಳಿಸುವಂತಾಗಬೇಕು ಎಂಬ ಉದ್ದೇಶದಿಂದ ಕರಡು ನಿಯಮಗಳನ್ನು ರೂಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT