ಭಾನುವಾರ, ಡಿಸೆಂಬರ್ 15, 2019
18 °C

ಸಾಣೇಹಳ್ಳಿ ಸ್ವಾಮೀಜಿಗೆ ರಂಗಪುರಸ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಣೇಹಳ್ಳಿ ಸ್ವಾಮೀಜಿಗೆ  ರಂಗಪುರಸ್ಕಾರ

ಬಳ್ಳಾರಿ: ಇಲ್ಲಿನ ರಂಗತೋರಣ ಸಂಸ್ಥೆಯ ‘ಸಾಂಸ್ಕೃತಿಕ ಸಾರ್ವಭೌಮ ಜೋಳದರಾಶಿ ದೊಡ್ಡನಗೌಡ ರಂಗಪುರಸ್ಕಾರ’ಕ್ಕೆ ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಯ್ಕೆಯಾಗಿದ್ದಾರೆ.

ಪ್ರಶಸ್ತಿಯು ₹ 21 ಸಾವಿರ ನಗದು, ಫಲಕವನ್ನು ಒಳಗೊಂಡಿದ್ದು, ಜುಲೈ 30ರಂದು ನಗರದಲ್ಲಿ  ಪ್ರಶಸ್ತಿ ಪ್ರದಾನ ನಡೆಯಲಿದೆ.

ದೊಡ್ಡನಗೌಡರ ಜನ್ಮದಿನವಾದ 27ರಂದು ಜೋಳದರಾಶಿ ಗ್ರಾಮದಲ್ಲಿ ರಂಗ ಜ್ಯೋತಿ ಯಾತ್ರೆ ನಡೆಯಲಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು ತಿಳಿಸಿದರು.

ಪ್ರತಿಕ್ರಿಯಿಸಿ (+)