ಮಂಗಳವಾರ, ಡಿಸೆಂಬರ್ 10, 2019
18 °C

ಸ್ಪೇನ್‌ಗೆ ಕರ್ನಾಟಕದ ನಿಕ್ಷೇಪ್‌

Published:
Updated:
ಸ್ಪೇನ್‌ಗೆ ಕರ್ನಾಟಕದ ನಿಕ್ಷೇಪ್‌

ಬೆಂಗಳೂರು: ರಾಜ್ಯದ ಭರವಸೆಯ ಟೆನಿಸ್ ಆಟಗಾರ ಬಿ.ಆರ್‌.ನಿಕ್ಷೇಪ್ ಬಾರ್ಸಿಲೋನಾದ ಆರ್‌.ವಿ ಟೆನಿಸ್‌ ಆಕಾಡೆಮಿಯಲ್ಲಿ ತರಬೇತಿ ಪಡೆಯುವ ಉದ್ದೇಶದಿಂದ ಸ್ಪೇನ್‌ಗೆ ತೆರಳಲಿದ್ದಾರೆ.

8 ವಾರಗಳ ತರಬೇತಿಯಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಎಟಿಪಿ ವಿಶ್ವ ರ್‍ಯಾಂಕಿಂಗ್‌ನಲ್ಲಿ 48ನೇ ಸ್ಥಾನದಲ್ಲಿದ್ದ ಆಸ್ಕರ್‌ ಹರ್ನಾಂಡಿಸ್ ಅವರ ಬಳಿ ನಿಕ್ಷೇಪ್ ತರಬೇತಿ ಪಡೆದುಕೊಳ್ಳಲಿದ್ದಾರೆ.

ಬೆಂಗಳೂರಿನ ಸುರಾನ ಕಾಲೇಜಿನಲ್ಲಿ ಓದುತ್ತಿರುವ ನಿಕ್ಷೇಪ್ 16 ವರ್ಷದೊಳಗಿನವರ ವಿಭಾಗದಲ್ಲಿ ಹೋದ ವರ್ಷ ಭಾರತದ ಕ್ರಮಾಂಕ ಪಟ್ಟಿಯಲ್ಲಿ ಮೊದಲ  ಸ್ಥಾನ ಹೊಂದಿದ್ದರು. ಡೇವಿಸ್ ಕಪ್ ಜೂನಿಯರ್ ವಿಭಾಗದಲ್ಲೂ ಆಡಿದ್ದಾರೆ.

ಪ್ರತಿಕ್ರಿಯಿಸಿ (+)