ಸೋಮವಾರ, ಡಿಸೆಂಬರ್ 16, 2019
18 °C

‘ಭ್ರಷ್ಟರನ್ನು ಬಹಿಷ್ಕರಿಸುವ ಸಮಾಜ ನಿರ್ಮಾಣವಾಗಬೇಕು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಭ್ರಷ್ಟರನ್ನು ಬಹಿಷ್ಕರಿಸುವ ಸಮಾಜ ನಿರ್ಮಾಣವಾಗಬೇಕು’

ಬೆಂಗಳೂರು: ‘ಭ್ರಷ್ಟಾಚಾರಿಗಳಿಗೆ ಸಮಾಜದಲ್ಲಿ ಇಂದಿಗೂ ಮರ್ಯಾದೆ ಸಿಗುತ್ತಿದೆ. ಅವರನ್ನು ಸಾಮಾಜಿಕವಾಗಿ ಬಹಿಷ್ಕರಿಸುವ ನಿರ್ಭೀತ ಸಮಾಜ ನಿರ್ಮಾಣಕ್ಕೆ ಯುವಜನತೆ ಪಣ ತೊಡಬೇಕು’ ಎಂದು ನಿವೃತ್ತ  ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಅಭಿಪ್ರಯ ವ್ಯಕ್ತಪಡಿಸಿದರು.

ಕೆಂಗೇರಿಯ ಶೇಷಾದ್ರಿಪುರ ಕಾಲೇಜಿನಲ್ಲಿ ನಡೆದ ‘ದೃಷ್ಟಿ ಕೋನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮತದಾನದ ವೇಳೆ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ಅಂತಹ ವ್ಯಕ್ತಿಗಳು ಅಭ್ಯರ್ಥಿ ಪಟ್ಟಿಯಲ್ಲಿ ಇಲ್ಲವಾದಲ್ಲಿ ನೋಟ ನಿಮ್ಮ ಆಯ್ಕೆ ಆಗಬೇಕು. ಆಗ ಮಾತ್ರ ಪಕ್ಷಗಳು ಸೂಕ್ತ ಅಭ್ಯರ್ಥಿಗಳಿಗೆ ಬಿ.ಫಾರಂ ನೀಡುತ್ತವೆ’ ಎಂದು ಹೇಳಿದರು.

ಕಾಲೇಜು ಟ್ರಸ್ಟ್‌ನ ಕಾರ್ಯದರ್ಶಿ ಸರೋಜ ಕೆ.ಎಂ.ನಂಜಪ್ಪ, ‘ಪ್ರಮಾಣಿಕರು ವಿದ್ಯಾರ್ಥಿಗಳಿಗೆ ಆದರ್ಶವಾಗಬೇಕು. ಭ್ರಷ್ಟಾಚಾರ ತಡೆ ಹಾಗೂ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಕಾರ್ಯ ದಲ್ಲಿ ವಿದ್ಯಾರ್ಥಿಗಳಿಂದಲೇ ನಡೆಯಬೇಕು’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)