ಶುಕ್ರವಾರ, ಡಿಸೆಂಬರ್ 13, 2019
21 °C

'ಕೆಲವೊಂದು ದೇಶಗಳು ರಾಜಕೀಯ ಗುರಿ ಸಾಧನೆಗಾಗಿ ಭಯೋತ್ಪಾದನೆಯನ್ನು ಬಳಸುತ್ತಿವೆ'

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

'ಕೆಲವೊಂದು ದೇಶಗಳು ರಾಜಕೀಯ ಗುರಿ ಸಾಧನೆಗಾಗಿ ಭಯೋತ್ಪಾದನೆಯನ್ನು ಬಳಸುತ್ತಿವೆ'

ಹ್ಯಾಂಬರ್ಗ್‌: ರಾಜಕೀಯ ಗುರಿ ಸಾಧನೆಗಾಗಿ ಕೆಲವು ರಾಷ್ಟ್ರಗಳು ಭಯೋತ್ಪಾದನೆಯನ್ನು ಬಳಸುತ್ತಿವೆ. ಭಯೋತ್ಪಾದನೆಯ ವಿರುದ್ದ ಹೋರಾಡಲು ಜಾಗತಿಕ ನಾಯಕರು ಒಗ್ಗಟ್ಟಾಗಿ ನಿಲ್ಲಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಅವರು ಜಿ20 ಶೃಂಗಸಭೆಯಲ್ಲಿ ಮಾತನಾಡಿದ ಅವರು ಭಯೋತ್ಪಾದನೆ ನಿಗ್ರಹ ಹೋರಾಟದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಿಗುತ್ತಿರುವ ಪ್ರತಿಕ್ರಿಯೆ ಇನ್ನಷ್ಟು ಪ್ರಬಲವಾಗಬೇಕಾಗಿದೆ. ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳಾದ ಲಷ್ಕರೆ-ಎ-ತೈಯಬಾ ಮತ್ತು ಜೈಷೆ–ಎ–ಮೊಹಮ್ಮದ್‌‍ನಿಂದ ಹಿಡಿದು ಐಎಸ್‍ಐಸ್ ಮತ್ತು ಅಲ್ ಖೈದಾ ಸಂಘಟನೆಗಳೆಲ್ಲವೂ ವಿಭಿನ್ನವಾಗಿರಬಹುದು ಆದರೆ ಅವುಗಳ ವಿಚಾರಧಾರೆ ಒಂದೇ ಆಗಿದೆ.

ಈ ವೇಳೆ 11 ಅಂಶಗಳಿರುವ ಕಾರ್ಯಸೂಚಿಯನ್ನು (ಆಕ್ಷನ್ ಅಜೆಂಡಾ) ಮೋದಿ ಪ್ರಸ್ತುತ ಪಡಿಸಿದ್ದಾರೆ.

ಜಿ20 ಶೃಂಗಸಭೆಯಲ್ಲಿ ನಡೆದ ಬ್ರಿಕ್ಸ್ ನಾಯಕರ ಅನೌಪಚಾರಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ಭಯೋತ್ಪಾದನೆಗೆ ನೀಡುವ ಆರ್ಥಿಕ ಬೆಂಬಲ ನೀಡುವುದನ್ನು ಮತ್ತು ಅವರಿಗೆ ಬೆಂಬಲ, ಪ್ರಾಯೋಜಕತ್ವ ನೀಡುವುದನ್ನು ನಿಲ್ಲಿಸಬೇಕುಎಂದು ಹೇಳಿದ್ದಾರೆ.

ಭಾರತದಲ್ಲಿ ಜಿಎಸ್‍ಟಿ ಅನುಷ್ಠಾನಕ್ಕೆ ತಂದಿರುವುದನ್ನು ಉಲ್ಲೇಖಿಸಿದ ಮೋದಿ ಜಾಗತಿಕ ಮಟ್ಟದ ಆರ್ಥಿಕ ಬೆಳವಣಿಗೆಗೆ ಎಲ್ಲರೂ ಜತೆಯಾಗಿ ಕಾರ್ಯವೆಸಗಬೇಕು ಎಂದಿದ್ದಾರೆ.

ಪ್ರತಿಕ್ರಿಯಿಸಿ (+)