ಜಾಗತಿಕ ಅಣ್ವಸ್ತ್ರ ನಿಷೇಧ ಒಪ್ಪಂದಕ್ಕೆ ಒಪ್ಪದ ಭಾರತ

7

ಜಾಗತಿಕ ಅಣ್ವಸ್ತ್ರ ನಿಷೇಧ ಒಪ್ಪಂದಕ್ಕೆ ಒಪ್ಪದ ಭಾರತ

Published:
Updated:
ಜಾಗತಿಕ ಅಣ್ವಸ್ತ್ರ ನಿಷೇಧ ಒಪ್ಪಂದಕ್ಕೆ ಒಪ್ಪದ ಭಾರತ

ವಿಶ್ವಸಂಸ್ಥೆ: ಜಾಗತಿಕವಾಗಿ ಅಣ್ವಸ್ತ್ರಗಳನ್ನು ನಿಷೇಧಿಸುವ ಮಹತ್ವದ ಒಪ್ಪಂದವನ್ನು ವಿಶ್ವಸಂಸ್ಥೆ ಅಂಗೀಕರಿಸಿದೆ. ಆದರೆ, ಭಾರತ, ಪಾಕಿಸ್ತಾನ ಮತ್ತು ಚೀನಾ ಸೇರಿದಂತೆ ಒಂಬತ್ತು ದೇಶಗಳು ಈ ಒಪ್ಪಂದದಿಂದ ಹೊರಗುಳಿದಿವೆ.ಕಾನೂನುಬದ್ಧವಾಗಿ ಅಣ್ವಸ್ತ್ರಗಳನ್ನು ನಿಷೇಧಿಸುವ ಈ ಒಪ್ಪಂದದ ಪರವಾಗಿ ಪರವಾಗಿ 122 ರಾಷ್ಟ್ರಗಳು ಶುಕ್ರವಾರ ಮತ ಚಲಾಯಿಸಿವೆ. ನೆದರ್ಲೆಂಡ್ಸ್ ಒಪ್ಪಂದದ ವಿರುದ್ಧವಾಗಿ ಮತ­ಚಲಾಯಿಸಿದೆ. ಸಿಂಗಪುರ ಒಪ್ಪಂದವನ್ನು ತಿರಸ್ಕರಿಸಿದೆ.ಅಮೆರಿಕ, ರಷ್ಯಾ, ಬ್ರಿಟನ್, ಫ್ರಾನ್ಸ್, ಉತ್ತರ ಕೊರಿಯಾ ಮತ್ತು ಇಸ್ರೇಲ್ ಒಪ್ಪಂದದಿಂದ ಹೊರಗುಳಿದ ಇತರ ದೇಶಗಳು.ಭವಿಷ್ಯದ ಭರವಸೆಗಳಿಗೆ ಸ್ಪಂದನೆ:  ‘ನಾವು ಈ ಒಪ್ಪಂದದ ಮೂಲಕ ಪ್ರಸ್ತುತ ಮತ್ತು ಭವಿಷ್ಯದ ಜನಾಂಗದ ಭರವಸೆಗಳಿಗೆ ಸ್ಪಂದಿಸುತ್ತಿದ್ದೇವೆ ಎಂಬ ಅಂಶ ನಮ್ಮನ್ನು ಭಾವುಕಗೊಳಿಸಿದೆ’ ಎಂದು ಕೋಸ್ಟಾರಿಕಾ ರಾಯಭಾರಿ ಮತ್ತು ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಎಲ್ಯಾನೆ ವ್ಹೈಟ್ ಗೊಮೇಜ್ ಸಂಭ್ರಮ ವ್ಯಕ್ತಪಡಿಸಿದರು.

*

ಒಪ್ಪಂದಕ್ಕೆ ತೋರಿದ ಉತ್ಸಾಹವು  ಅಣ್ವಸ್ತ್ರ ಆತಂಕದ ಕುರಿತ ಕಳಕಳಿಯನ್ನು ತೋರುತ್ತದೆ. ಅಣ್ವಸ್ತ್ರ ರಹಿತ ಜಗತ್ತಿನ ಸಮಾನ ನಿರೀಕ್ಷೆಗಳನ್ನು ಪೂರೈಸುವಲ್ಲಿ ಇದು ಮಹತ್ವದ ಹೆಜ್ಜೆ.

ಅಂಟೋನಿಯೊ ಗುಟೆರೆಸ್

ವಿಶ್ವಸಂಸ್ಥೆ  ಮಹಾಪ್ರಧಾನ ಕಾರ್ಯದರ್ಶಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry