ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡಲು ತುಂಬಿದ ಅಕ್ಷಯನಗರ ಕೆರೆಗೆ ಗಂಗಾ ಆರತಿ

Last Updated 9 ಜುಲೈ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಆ ಕೆರೆ ಮುಂಗಾರು ಮಳೆಯಿಂದ ಒಡಲು ತುಂಬಿಸಿಕೊಂಡು ಕಂಗೊಳಿಸುತ್ತಿತ್ತು. ಸಂಘಟಿತ ಪ್ರಯತ್ನದಿಂದ ಕೆರೆ ಸಮೃದ್ಧವಾಗಿರುವುದು ಆ ಭಾಗದ ಜನರಲ್ಲಿ ಸಾರ್ಥಕ ಭಾವ ಮೂಡಿಸಿತ್ತು. ಇದನ್ನು ಜಲ ಹಬ್ಬವಾಗಿ (ಗಂಗಾ ಆರತಿ) ಆಚರಿಸುವ ಉದ್ದೇಶದಿಂದ ಆ ಬಡಾವಣೆಯ ಜನರು ಕೆರೆಯ ಅಂಗಳದಲ್ಲಿ ಸೇರಿದ್ದರು. ಆಬಾಲವೃದ್ಧರಾದಿಯಾಗಿ ಎಲ್ಲರೂ ಹಬ್ಬದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ಬೇಗೂರು– ಹುಳಿಮಾವು ಮುಖ್ಯರಸ್ತೆಯ ಬಳಿ ಇರುವ ಅಕ್ಷಯನಗರ ಕೆರೆಯಲ್ಲಿ ಭಾನುವಾರ ಸಂಜೆ ಕಂಡುಬಂದ ದೃಶ್ಯಗಳಿವು.
ಜಲ ಮತ್ತು ಪರಿಸರ ಸಂರಕ್ಷಣೆಗಾಗಿ ಶ್ರಮಿಸುತ್ತಿರುವ ಸಮಾನಮನಸ್ಕರ ವೇದಿಕೆ ‘ಜಲನಿಧಿ’ಯು ಅಕ್ಷಯನಗರ ಕೆರೆಯನ್ನು ಪುನರುಜ್ಜೀವನಗೊಳಿಸಿದೆ. ಬಿಡಿಎ, ಸ್ಥಳೀಯ ಶಾಸಕರು, ಪಾಲಿಕೆ ಸದಸ್ಯರು ಹಾಗೂ ಕೆರೆಯ ಸುತ್ತಮುತ್ತಲಿನ ಪ್ರದೇಶದ ನಾಗರಿಕರ ಸಹಕಾರದಿಂದ ಕೆರೆಗೆ ಮರುಜೀವ ನೀಡಲಾಗಿದೆ.
ಕೆರೆಯ ಹೂಳು ತೆಗೆಯಲಾಗಿದೆ. ಕೆರೆ ಸುತ್ತಲೂ ಮಣ್ಣಿನ ನಡಿಗೆ ಪಥವನ್ನು ನಿರ್ಮಿಸಲಾಗಿದೆ. ಬಯಲು ರಂಗಮಂದಿರ, ಮಕ್ಕಳ ಆಟದ ಮೈದಾನ ನಿರ್ಮಿಸಲಾಗಿದೆ. ಗಿಡಗಳನ್ನು ನಡೆಲಾಗಿದೆ.

ಜಲ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವುದು ಹಾಗೂ ಜಲದೇವತೆಯನ್ನು ಆರಾಧಿಸುವ ಉದ್ದೇಶದಿಂದ ‘ಗಂಗಾ ಆರತಿ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕೆರೆಯ ಅಂಗಳವನ್ನು ಶೃಂಗರಿಸಲಾಗಿತ್ತು. ಮಹಿಳೆಯರು ವಿವಿಧ ರೀತಿಯ ರಂಗೋಲಿ ಚಿತ್ತಾರಗಳನ್ನು ಬಿಡಿಸಿದ್ದರು. ಕೆರೆಯ ಸುತ್ತಲೂ ದೀಪದ ಆರತಿಗಳನ್ನು ಇಟ್ಟು ಬೆಳಗಿಸಲಾಗಿತ್ತು.

ವಿಕ್ರಮ್‌ ಹಾಗೂ ಉದಯ್‌ ತಂಡದವರು ಚಂಡೆಮದ್ದಲೆ ಕಾರ್ಯಕ್ರಮ ನಡೆಸಿಕೊಟ್ಟರು. ಲಕ್ಷ್ಮಿನರಸಿಂಹ ಭಜನಾ ಮಂಡಳಿಯ ಸದಸ್ಯರು ಭಜನೆ ನಡೆಸಿಕೊಟ್ಟರು. ರವಿಕುಮಾರ್‌ ಹಾಗೂ ತಂಡದವರು ವೇದಘೋಷ ಮೊಳಗಿಸಿದರು.

‘ಬಡಾವಣೆ ನಿವಾಸಿಗಳ ಪ್ರಯತ್ನದಿಂದಾಗಿ ಕೆರೆ ಸ್ವಚ್ಛಗೊಂಡಿದೆ. ಜಲಸಂರಕ್ಷಣೆ, ನೀರಿನ ಸದ್ಬಳಕೆ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೆವು’ ಎಂದು ನೇತೃತ್ವ  ವಹಿಸಿದ್ದ ಕೆನರಾ ಬ್ಯಾಂಕ್‌ನ ನಿವೃತ್ತ    ಅಧಿಕಾರಿ     ರಮೇಶ್‌ ಕುಮಾರ್‌ ಬನ್ನೂರ್ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT