ಶುಕ್ರವಾರ, ಡಿಸೆಂಬರ್ 13, 2019
16 °C

ಚಿರಯೌವ್ವನ ಇವರದೇ...

ಪೃಥ್ವಿರಾಜ್‌ Updated:

ಅಕ್ಷರ ಗಾತ್ರ : | |

ಚಿರಯೌವ್ವನ ಇವರದೇ...

ವಯಸ್ಸು ಹೆಚ್ಚಾದಂತೆಲ್ಲಾ ಸೌಂದರ್ಯ ಕುಗ್ಗುತ್ತಾ ಹೋಗುತ್ತದೆ. ಆದರೆ ಈ ಮಹಿಳೆಯರನ್ನು ನೋಡಿದರೆ ಹಾಗೆ ಅನಿಸುವುದಿಲ್ಲ.

ಚಿತ್ರದಲ್ಲಿ ಕಾಣುತ್ತಿರುವ ಈ ಮೂವರು ಸಹೋದರಿಯರು ಇನ್ನೂ ಹದಿಹರೆಯದವರು ಎಂದು ಅನಿಸಬಹುದು. ಆದರೆ ಇವರ ವಯಸ್ಸು ಕ್ರಮವಾಗಿ 41, 40, 36. ಇವರಲ್ಲಿ ದೊಡ್ಡವರಾದ ಲ್ಯೂರ್‌ ಸೂ ಅವರು (41) ಫ್ಯಾಷನ್‌ ಡಿಸೈನರ್‌ ಆಗಿ, ಬ್ಲಾಗರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಇನ್ನು ಫೆಫೆ (40) ಮತ್ತು ಷಾರೋನ್‌ (36) ಕಾಲೇಜು ದಿನಗಳಲ್ಲಿ ಹೇಗಿದ್ದರೋ, ಇಂದಿಗೂ ಹಾಗೇ ಇದ್ದಾರೆ. ಇನ್ನೂ ಸ್ವಾರಸ್ಯವೆಂದರೆ ಫೆಫೆ ಅವರಿಗೆ 8 ಮತ್ತು 10 ವರ್ಷದ ಇಬ್ಬರು ಮಕ್ಕಳಿದ್ದಾರೆ.

ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಇವರ ಚಿತ್ರಗಳೇ ಹರಿದಾಡುತ್ತಿವೆ. ಇವರ ವಯಸ್ಸನ್ನು ಕೇಳಿ ಎಲ್ಲರೂ ಆಶ್ಚರ್ಯಪಡುತ್ತಿದ್ದಾರೆ. ಇವರ ತಾಯಿಯ ವಯಸ್ಸು 60 ದಾಟಿದ್ದರೂ ಇನ್ನೂ 20ರ ಯುವತಿಯಂತೇ ಇದ್ದಾರೆ.

ಈಚೆಗಷ್ಟೇ ತೈವಾನ್‌ ಮಾಧ್ಯಮಗಳು ಈ ಕಟುಂಬವನ್ನು ಸಂದರ್ಶನ ಮಾಡಿದ್ದವು. ಆಗ ಮಾತನಾಡಿದ ಫೆಫೆ, ‘ನಮ್ಮ ತಂದೆಯ ವಯಸ್ಸು ಈಗ 74. ಅವರೂ ಸಹ ಯುವಕರಂತೆ ಕಾಣುತ್ತಾರೆ. ಮಾಧ್ಯಮಗಳ ಮುಂದೆ ಬಂದು ಮಾತನಾಡಲು ಅವರಿಗೆ ಇಷ್ಟವಾಗುವುದಿಲ್ಲ. ಅದಕ್ಕಾಗಿ ಬಂದಿಲ್ಲ.

ನಮ್ಮ ಕುಟುಂಬದ ಸದಸ್ಯರ ವಯಸ್ಸು ಹೆಚ್ಚಾದರೂ ಯೌವನ ಇನ್ನೂ ಹಾಗೆಯೇ ಇದೆ. ಇದಕ್ಕೆ ನಮ್ಮ ಕುಟುಂಬದ ವಂಶವಾಹಿಯೂ ಕಾರಣ. ಅದಲ್ಲದೇ ನಿತ್ಯ ಶುದ್ಧ ನೀರನ್ನು ಹೆಚ್ಚಾಗಿ ಕುಡಿಯುತ್ತೇವೆ, ಇದರಿಂದಾಗಿ ನಮ್ಮ ಚರ್ಮ ಇನ್ನೂ ಸುಕ್ಕುಗಟ್ಟಿಲ್ಲ ಎಂದು ಹೇಳಿದರು. 

ಪ್ರತಿಕ್ರಿಯಿಸಿ (+)