ಶನಿವಾರ, ಡಿಸೆಂಬರ್ 14, 2019
22 °C

ಸ್ಯಾನಿಟರಿ ನ್ಯಾಪ್‌ಕಿನ್‌ಗಳಿಗೆ ಜಿಎಸ್‌ಟಿ: ಓದುಗರ ಪ್ರತಿಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ಯಾನಿಟರಿ ನ್ಯಾಪ್‌ಕಿನ್‌ಗಳಿಗೆ ಜಿಎಸ್‌ಟಿ: ಓದುಗರ ಪ್ರತಿಕ್ರಿಯೆ

ಕಡಿಮೆ ಬೆಲೆಗೆ ದೊರಕಲಿ

ಸ್ಯಾನಿಟರಿ ಪ್ಯಾಡುಗಳನ್ನು ಜಿಎಸ್‌ಟಿಯಿಂದ ಹೊರಗಿಡುವುದಷ್ಟೆ ಅಲ್ಲದೆ ಅದಕ್ಕೆ ಸಬ್ಸಿಡಿ ನೀಡಿ ಎಲ್ಲ ವರ್ಗದ ಮಹಿಳೆಯರಿಗೂ ಕಡಿಮೆ ಬೆಲೆಯಲ್ಲಿ ಸ್ಯಾನಿಟರಿ ಪ್ಯಾಡ್‌ಗಳು ದೊರಕುವಂತೆ ಮಾಡಬೇಕು ಬಟ್ಟೆಗಳನ್ನು ಉಪಯೇಗಿಸಿ  ನಂಜಾಗಿ ಒದ್ದಾಡುವುದನ್ನು ಇದರಿಂದ ತಪ್ಪಿಸಬಹುದು.

–ಹೇಮಲತಾ ಮುರಳಿ,

ಕುಮಾರಸ್ವಾಮಿ ಬಡಾವಣೆ

*

ಉಳಿತಾಯಕ್ಕೆ ಕತ್ತರಿ

ತಿಂಗಳಿಗೆ ಕನಿಷ್ಠ 10–12 ಪ್ಯಾಡ್‌ಗಳು ಬೇಕಾಗುತ್ತವೆ. ಅಂದರೆ ವರ್ಷಕ್ಕೆ ಕನಿಷ್ಠ 144 ಅಬಬ್ಬಾ...! 13 ವರ್ಷದ ಹುಡುಯರಿಂದ ಶುರುವಾಗಿ 45ರ ಮಹಿಳೆಯರವರೆಗೂ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಬಳಸಲೇಬೇಕಾದ ಅನಿವಾರ್ಯತೆ. ಹೀಗಿದ್ದೂ ಅದನ್ನು ತೆರಿಗೆ ವ್ಯಾಪ್ತಿಗೆ ತಂದದ್ದು ಮಹಿಳೆಯರ ಉಳಿತಾಯಕ್ಕೆ ಕತ್ತರಿ ಹಾಕುವ ಕಾರ್ಯ.

–ಸುಲೋಚನಾ.ಜೆ.ರಾವ್, ಮಲ್ಲೇಶ್ವರ

*

ತೆರಿಗೆ ಹೆಚ್ಚಳ ಹಾಸ್ಯಾಸ್ಪದ

ಕಾಂಡೋಮ್‌ಗಳನ್ನು ಉಚಿತವಾಗಿ ಹಂಚುತ್ತಿರುವ ಸರ್ಕಾರ, ಹೆಣ್ಣು ಮಕ್ಕಳಿಗೆ ಅವಶ್ಯಕವಾದ ಸ್ಯಾನಿಟರಿ ಪ್ಯಾಡ್‌ಗಳ ಮೇಲೆ ತೆರಿಗೆ ಹೆಚ್ಚಿಸಿರುವುದು ಹಾಸ್ಯಾಸ್ಪದ. ಮಹಿಳೆಯರ ಆರೋಗ್ಯದ ಬಗ್ಗೆ ಸರ್ಕಾರಗಳಿಗಿರುವ ನಿರ್ಲಕ್ಷಕ್ಕೆ ಇದು ಉದಾಹರಣೆ.

–ಪುಷ್ಪಲತಾ ನಾಗರಾಜು, ಕಸ್ತೂರಬಾ ನಗರ

*

ಪರಿಸರಸ್ನೇಹಿ ನ್ಯಾಪ್‌ಕಿನ್‌ ದೊರಕಲಿ

ಋತುಸ್ರಾವ ನೈಸರ್ಗಿಕ ಪ್ರಕ್ರಿಯೆ. ಆರೋಗ್ಯಕರವಾಗಿ ‘ಆ’ ದಿನಗಳನ್ನು ಕಳೆಯಲು ಬಟ್ಟೆಗಿಂತಲೂ ನ್ಯಾಪ್‌ಕಿನ್‌ಗಳು ಅತ್ಯವಶ್ಯಕ. ಅವುಗಳ ಮೇಲೆ ತೆರಿಗೆ ಹೇರಿರುವುದು ಸರಿಯಲ್ಲ. ತೆರಿಗೆ ಮುಕ್ತ ಹಾಗೂ ಪರಿಸರಸ್ನೇಹಿ ನ್ಯಾಪ್‌ಕಿನ್‌ಗಳು ಎಲ್ಲರಿಗೂ ದೊರಕುವಂತಾಗಲಿ.

–ಸೌಮ್ಯ ಪಾಟೀಲ್

*

ತೆರಿಗೆ ರದ್ದುಪಡಿಸಿ

ಸ್ಯಾನಿಟರಿ ಪ್ಯಾಡ್‌ಗಳು ದಿನಬಳಕೆ ವಸ್ತುಗಳಲ್ಲಿ ಒಂದು. ಅದರ ಬಳಕೆಗೆ ವರ್ಗಗಳಿಲ್ಲ. ಹಾಗಾಗಿ ಕೇಂದ್ರ ಸರ್ಕಾರ ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಮೇಲೆ ಹೇರಿರುವ ತೆರಿಗೆಯನ್ನು ಕೂಡಲೇ ರದ್ದು ಪಡಿಸಬೇಕು.

–ಅನುಷಾ ಜೋಸಫ್‌, ಆಡುಗೋಡಿ

ಪ್ರತಿಕ್ರಿಯಿಸಿ (+)