ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕ್ಸಲ್‌ ಹಿಂಸಾಚಾರ: 20 ವರ್ಷಗಳಲ್ಲಿ 12 ಸಾವಿರ ಬಲಿ

Last Updated 10 ಜುಲೈ 2017, 19:30 IST
ಅಕ್ಷರ ಗಾತ್ರ

ಪೈಶಾಚಿಕ ದಾಳಿ

ಈ ವರ್ಷದ ಏಪ್ರಿಲ್‌ 24ರಂದು ಸಿಆರ್‌ಪಿಎಫ್‌ ತುಕಡಿ ಮೇಲೆ ನಡೆದ ದಾಳಿಯು ಇತ್ತೀಚೆಗಿನ ವರ್ಷಗಳಲ್ಲಿ ನಕ್ಸಲರು ನಡೆಸಿದ್ದ ಅತ್ಯಂತ ಭೀಕರ ದಾಳಿ.  25 ಭದ್ರತಾ ಸಿಬ್ಬಂದಿ ಈ ದಾಳಿಯಲ್ಲಿ ಬಲಿಯಾಗಿದ್ದರು. 2010ರ ಏಪ್ರಿಲ್‌ನಲ್ಲಿ ನಕ್ಸಲರು ದಾಂತೇವಾಡದಲ್ಲಿ ದಾಳಿ ನಡೆಸಿ 76 ಸಿಬ್ಬಂದಿಯನ್ನು ಹತ್ಯೆ ಮಾಡಿದ್ದರು.

**

ಅಭಿವೃದ್ಧಿಗಾಗಿ ಯೋಜನೆ

ಎಡಪಂಥೀಯ ಉಗ್ರವಾದವನ್ನು ಹತ್ತಿಕ್ಕುವುದಕ್ಕಾಗಿ ಕೇಂದ್ರ ಸರ್ಕಾರ ‘ರಾಷ್ಟ್ರೀಯ ನೀತಿ ಮತ್ತು ಕ್ರಿಯಾ ಯೋಜನೆ’ ಆರಂಭಿಸಿದೆ. ಭದ್ರತೆ ಮತ್ತು ಅಭಿವೃದ್ಧಿ ವಿಚಾರಗಳನ್ನು ಒಳಗೊಂಡಿರುವ ಈ ಯೋಜನೆಯು ಸ್ಥಳೀಯ ಸಮುದಾಯಗಳಿಗೆ ಹಕ್ಕುಗಳು ಮತ್ತು ಅಧಿಕಾರ ನೀಡುವ ಉದ್ದೇಶ ಹೊಂದಿದೆ.

***

ಯೋಜನೆ ಅಡಿಯಲ್ಲಿ ಏನೇನಾಗಿದೆ?

* ಕಳೆದ ಮೂರು ವರ್ಷಗಳಲ್ಲಿ ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ 307 ಪೊಲೀಸ್‌ ಠಾಣೆಗಳ ನಿರ್ಮಾಣ

* ಯೋಜನೆಯ ಮೊದಲ ಹಂತದಲ್ಲಿ ತೀರಾ ಒಳ ಪ್ರದೇಶಗಳಲ್ಲಿ 1,391 ಕಿ.ಮೀ  ರಸ್ತೆ ನಿರ್ಮಾಣ

* ₹11,725 ಕೋಟಿ ವೆಚ್ಚದಲ್ಲಿ ಒಂಬತ್ತು ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ 5,412 ಕಿ.ಮೀ ರಸ್ತೆ ನಿರ್ಮಾಣಕ್ಕೆ ಅನುಮತಿ

* ದೂರಸಂಪರ್ಕ ಸುಧಾರಣೆಗಾಗಿ 2,187 ಮೊಬೈಲ್‌ ಟವರ್‌ಗಳ ನಿರ್ಮಾಣ. ಇನ್ನೂ 2,882 ಟವರ್‌ಗಳ ಸ್ಥಾಪನೆ ಪ್ರಕ್ರಿಯೆ ಪ್ರಗತಿಯಲ್ಲಿ

* 38 ನಕ್ಸಲ್‌ ಪೀಡಿತ ಜಿಲ್ಲೆಗಳಲ್ಲಿ ಹಣಕಾಸು ವ್ಯವಹಾರ ಸುಧಾರಣೆಗಾಗಿ 358 ಬ್ಯಾಂಕ್‌ ಮತ್ತು 752 ಎಟಿಎಂಗಳ ಸ್ಥಾಪನೆ. 1,789 ಅಂಚೆ ಕಚೇರಿಗಳ ಸ್ಥಾಪನೆಗೆ ಅನುಮತಿ

ಹೆಚ್ಚುವರಿ ಅನುದಾನಕ್ಕೆ ಮನವಿ

ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳುವುದಕ್ಕಾಗಿ ಹೆಚ್ಚುವರಿ ಅನುದಾನ ನೀಡುವಂತೆ ಹಣಕಾಸು ಸಚಿವಾಲಯಕ್ಕೆ ಕೇಂದ್ರ ಗೃಹ ಸಚಿವಾಲಯ ಈಗಾಗಲೇ ಮನವಿ ಮಾಡಿದೆ. ಒಂದು ವೇಳೆ, ಹಣಕಾಸು ಸಚಿವಾಲಯ ಅನುದಾನ ನೀಡಲು ಒಪ್ಪಿದರೆ, ಭದ್ರತೆಗೆ ಸಂಬಂಧಿಸಿದ ಯೋಜನೆ, ವಿಶೇಷ ಮೂಲಸೌಕರ್ಯ ಯೋಜನೆ (ಎಸ್‌ಐಎಸ್‌), ಸಮಗ್ರ ಕ್ರಿಯಾ ಯೋಜನೆ (ಐಎಪಿ) ಸೇರಿದಂತೆ ಇತರ ಕೆಲವು ಯೋಜನೆಗಳನ್ನು ಇನ್ನಷ್ಟು ವರ್ಷ ವಿಸ್ತರಿಸಲಾಗುವುದು ಎಂದು ಗೃಹ ಸಚಿವಾಲಯ ಹೇಳಿದೆ.

***

ಮೂರು ವರ್ಷಗಳಲ್ಲಿ...

25%
2011ರ ಮೇ ತಿಂಗಳಿಂದ–2014ರ ಏಪ್ರಿಲ್‌ ನಡುವಣ ಅವಧಿಗೆ ಹೋಲಿಸಿದರೆ, 2014ರ ಮೇ–2017ರ ಏಪ್ರಿಲ್‌ ಅವಧಿಯಲ್ಲಿ ನಕ್ಸಲ್‌ ಹಿಂಸಾಚಾರದ ಪ್ರಮಾಣ ಕಡಿಮೆಯಾಗಿದೆ

***

10: ನಕ್ಸಲರು ಸಕ್ರಿಯರಾಗಿರುವ ರಾಜ್ಯಗಳ ಸಂಖ್ಯೆ

68: ನಕ್ಸಲ್‌ ಪೀಡಿತ ಜಿಲ್ಲೆಗಳ ಸಂಖ್ಯೆ (10 ರಾಜ್ಯಗಳಲ್ಲಿ)

ನಕ್ಸಲರ ಶೇ 90ರಷ್ಟು ಚಟುವಟಿಕೆಗಳು 35 ಜಿಲ್ಲೆಗಳಿಗೆ ಸೀಮಿತವಾಗಿವೆ.

42%: ಕಳೆದ ಮೂರು ವರ್ಷಗಳಲ್ಲಿ ಭದ್ರತಾ ಪಡೆಗಳಲ್ಲಿ ಸಾವು ನೋವಿನ ಪ್ರಮಾಣದಲ್ಲಿ ಇಳಿಕೆ

65%: ನಕ್ಸಲರ ಹತ್ಯೆಯಲ್ಲಿ ಆಗಿರುವ ಏರಿಕೆ ಪ್ರಮಾಣ

125%: ನಕ್ಸಲರು ಶರಣಾಗುತ್ತಿರುವ ಪ್ರಮಾಣದಲ್ಲಿ ಆದ ಹೆಚ್ಚಳ

9,300: ಹಿಂಸಾಚಾರದಲ್ಲಿ ಅಸುನೀಗಿದ ನಾಗರಿಕರ ಸಂಖ್ಯೆ

2,700: ಪ್ರಾಣಕಳೆದುಕೊಂಡ ಭದ್ರತಾ ಪಡೆಗಳ ಸಿಬ್ಬಂದಿ

ಮುಗ್ಧರ ಸಾವು: ಪೊಲೀಸ್‌ ಮಾಹಿತಿದಾರರು ಎಂದು ಆರೋಪಿಸಿ ಹಲವು ಜನರನ್ನು ನಕ್ಸಲರು ಕೊಂದಿದ್ದಾರೆ. ಇನ್ನುಳಿದವರು ನಕ್ಸಲರು ಮತ್ತು ಭದ್ರತಾ ಸಿಬ್ಬಂದಿ ನಡುವಣ ಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿದವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT