ಭಾನುವಾರ, ಡಿಸೆಂಬರ್ 8, 2019
21 °C

ವಿಂಬಲ್ಡನ್: ಎಂಟರ ಘಟ್ಟಕ್ಕೆ ಮರ್ರೆ

Published:
Updated:
ವಿಂಬಲ್ಡನ್: ಎಂಟರ ಘಟ್ಟಕ್ಕೆ ಮರ್ರೆ

ಲಂಡನ್: ಹಾಲಿ ಚಾಂಪಿಯನ್ ಆ್ಯಂಡಿ ಮರ್ರೆ ಅವರು ವಿಂಬಲ್ಡನ್ ಟೆನಿಸ್‌ ಚಾಂಪಿಯನ್‌ಷಿಪ್‌ನ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ  ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದ್ದಾರೆ.

ಆಲ್‌ ಇಂಗ್ಲೆಂಡ್ ಟೆನಿಸ್ ಕೋರ್ಟ್‌ ನಲ್ಲಿ ಸೋಮವಾರ ನಡೆದ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಮರ್ರೆ 7–6,     6–4, 6–4ರ ಸೆಟ್‌ಗಳಿಂದ ಫ್ರಾನ್ಸ್‌ನ ಬೆನೊಟ್ ಪೇರ್ ವಿರುದ್ಧ ಜಯಿಸಿದರು.

ಕ್ವಾರ್ಟರ್ ಫೈನಲ್‌ಗೆ ರೋಜರ್‌: ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌ ಅವರು ಗ್ರ್ಯಾನ್‌ಸ್ಲ್ಯಾಮ್‌ನಲ್ಲಿ 50ನೇ ಬಾರಿ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿದರು.

ವಿಂಬಲ್ಡನ್‌ನಲ್ಲಿ ಏಳು ಪ್ರಶಸ್ತಿಗಳನ್ನು ಗೆದ್ದಿರುವ ರೋಜರ್‌, ಪ್ರೀ ಕ್ವಾರ್ಟರ್ ಫೈನಲ್‌ ಹಣಾಹಣಿಯಲ್ಲಿ 6–4, 6–2, 6–4ರಲ್ಲಿ ಗ್ರಿಗೊರ್‌ ಡಿಮಿಟ್ರೊವ್‌ ಅವರನ್ನು ಸೋಲಿಸಿದರು.

ಇತರ ಪಂದ್ಯಗಳಲ್ಲಿ  ಥಾಮಸ್‌ ಬರ್ಡಿಕ್‌ 6–3, 6–7, 6–3, 3–6, 6–3 ರಲ್ಲಿ ಡೊಮಿನಿಕ್‌ ಥಿಯೆಮ್‌ ಮೇಲೂ, ಮರಿನ್‌ ಸಿಲಿಕ್‌ 6–2, 6–2, 6–2ರಲ್ಲಿ  ಬಟಿಸ್ಟಾ ವಿರುದ್ಧವೂ ಗೆದ್ದರು.

ಮಹಿಳೆಯರ ಸಿಂಗಲ್ಸ್‌ ವಿಭಾಗದ ಪ್ರೀ ಕ್ವಾರ್ಟರ್‌ ಪಂದ್ಯಗಳಲ್ಲಿ ಸಿಮೊನಾ ಹಲೆಪ್‌ 7–6, 6–2ರಲ್ಲಿ ವಿಕ್ಟೋರಿಯಾ ಅಜರೆಂಕಾ ಎದುರೂ, ಗಾರ್ಬೈನ್‌ ಮುಗುರುಜಾ 4–6, 6–4, 6–4ರಲ್ಲಿ ಏಂಜಲಿಕ್‌ ಕೆರ್ಬರ್‌ ಮೇಲೂ, ವೀನಸ್‌ ವಿಲಿಯಮ್ಸ್‌ 6–3, 6–2ರಲ್ಲಿ ಅನಾ ಕೊಂಜುಹ್‌ ವಿರುದ್ಧವೂ, ಜೊಹಾನ್ನ ಕೊಂಥಾ 7–6, 4–6, 6–4 ರಲ್ಲಿ ಕ್ಯಾರೊ ಲಿನಾ ಗಾರ್ಸಿಯಾ ಮೇಲೂ ಗೆದ್ದರು. 

ಸಾನಿಯಾ ಜೋಡಿಗೆ ಸೋಲು: ಮಹಿಳೆ ಯರ ಡಬಲ್ಸ್‌ನ ಮೂರನೇ ಸುತ್ತಿನಲ್ಲಿ ಭಾರತದ ಸಾನಿಯಾ ಮಿರ್ಜಾ ಮತ್ತು ಕರ್ಸ್ಟನ್ ಫ್ಲಿಪ್‌ಕೆನ್ಸ್‌   2–6,  4–6ರ ನೇರ ಸೆಟ್‌ಗಳಲ್ಲಿ ಸ್ವಿಟ್ಜರ್‌ಲೆಂಡ್‌ನ ಮಾರ್ಟಿನಾ ಹಿಂಗಿಸ್ ಮತ್ತು ಯಂಗನ್ ಜಾನ್ ಚಾನ್ ಜೋಡಿಯ ಎದುರು ಸೋತರು.

*

(ವಿಂಬಲ್ಡನ್‌ ಟೆನಿಸ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ವಿಭಾಗದ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಗೆಲುವು ಗಳಿಸಿದ ಸಿಮೊನಾ ಹಲೆಪ್‌ ಸಂಭ್ರಮ)

ಪ್ರತಿಕ್ರಿಯಿಸಿ (+)