ಭಾನುವಾರ, ಡಿಸೆಂಬರ್ 15, 2019
17 °C

ಭಾರತ ‘ಎ’ ತಂಡಕ್ಕೆ ಸಮರ್ಥ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತ ‘ಎ’ ತಂಡಕ್ಕೆ ಸಮರ್ಥ್‌

ಬೆಂಗಳೂರು: ಕರ್ನಾಟಕದ ಆಟಗಾರ ಆರ್‌. ಸಮರ್ಥ್‌ ಅವರು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿರುವ ಭಾರತ ‘ಎ’ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.

ಈ ಮೊದಲು ತಂಡದಲ್ಲಿದ್ದ ತಮಿಳು ನಾಡಿನ ಆಟಗಾರ ಅಭಿನವ್‌ ಮುಕುಂದ್‌ ಅವರು ಶ್ರೀಲಂಕಾ ವಿರುದ್ಧದ ಟೆಸ್ಟ್‌ ಸರಣಿಗೆ ಪ್ರಕಟಿಸಲಾಗಿರುವ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಹೀಗಾಗಿ ರಾಜ್ಯದ ಸಮರ್ಥ್‌ಗೆ ಅದೃಷ್ಟ ಒಲಿದಿದೆ.

‘ಸಮರ್ಥ್‌ ಅವರನ್ನು ಭಾರತ ‘ಎ’ ತಂಡಕ್ಕೆ ಆಯ್ಕೆ ಮಾಡಿರುವ ವಿಷಯವನ್ನು ಬಿಸಿಸಿಐ ಸೋಮವಾರ ಮಧ್ಯಾಹ್ನ ನಮಗೆ ತಿಳಿಸಿದೆ’ ಎಂದು ಕೆಎಸ್‌ಸಿಎ ಕಾರ್ಯದರ್ಶಿ ಸುಧಾಕರ ರಾವ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಕರುಣ್‌ ನಾಯರ್‌ ಸಾರಥ್ಯದ ಭಾರತ ‘ಎ’ ತಂಡ ಆಗಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ‘ಎ’ ವಿರುದ್ಧ ನಾಲ್ಕು ದಿನಗಳ ಎರಡು ಟೆಸ್ಟ್‌ ಪಂದ್ಯಗಳನ್ನು ಆಡಲಿದೆ.

2013ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ  ಅಡಿ ಇಟ್ಟಿದ್ದ 24 ವರ್ಷದ ಸಮರ್ಥ್‌ ಅವರು 2016–17ನೇ ಸಾಲಿನ ರಣಜಿಯಲ್ಲಿ ಕರ್ನಾಟಕದ ಪರ ಹೆಚ್ಚು ರನ್‌ ಗಳಿಸಿದ ಆಟಗಾರ ಎನಿಸಿದ್ದರು. ಅವರು 702ರನ್‌ ಕಲೆಹಾಕಿದ್ದರು.

‘ಕೆಎಸ್‌ಸಿಎ ‘ಬಿ’ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ಸಂತೋಷ್‌ ಮೆನನ್‌ ಅವರು ಭಾರತ ತಂಡಕ್ಕೆ ಆಯ್ಕೆ ಯಾದ ವಿಷಯ ತಿಳಿಸಿದರು. ತಂಡದಲ್ಲಿ ಸ್ಥಾನ ಸಿಕ್ಕಿರುವುದಕ್ಕೆ ಅತೀವ ಸಂತಸ ವಾಗಿದೆ. ಈ ಅವಕಾಶವನ್ನು  ಸದುಪ ಯೋಗ ಪಡಿಸಿಕೊಳ್ಳಲು ಪ್ರಯತ್ನಿಸು ತ್ತೇನೆ’ ಎಂದು ಸಮರ್ಥ್‌ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)