ಶುಕ್ರವಾರ, ಡಿಸೆಂಬರ್ 6, 2019
17 °C

ಜಾನುವಾರು ಮಾರಾಟ ನಿರ್ಬಂಧದ ಮೇಲಿನ ತಡೆಯಾಜ್ಞೆ ದೇಶದಾದ್ಯಂತ ಅನ್ವಯವಾಗಲಿ: ಸುಪ್ರೀಂಕೋರ್ಟ್‌

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಜಾನುವಾರು ಮಾರಾಟ ನಿರ್ಬಂಧದ ಮೇಲಿನ ತಡೆಯಾಜ್ಞೆ ದೇಶದಾದ್ಯಂತ ಅನ್ವಯವಾಗಲಿ: ಸುಪ್ರೀಂಕೋರ್ಟ್‌

ನವದೆಹಲಿ: ಹತ್ಯೆಗಾಗಿ ಜಾನುವಾರು ಮಾರಾಟ ಮಾಡುವುದನ್ನು ನಿಷೇಧಿಸಿ ಕೇಂದ್ರ ಸರ್ಕಾರ ಹೊರಡಿಸಿದ್ದ ಅಧಿಸೂಚನೆಗೆ ಮದ್ರಾಸ್‌ ಹೈಕೋರ್ಟ್‌ ನೀಡಿರುವ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ಎತ್ತಿಹಿಡಿದಿದೆ. ಅಲ್ಲದೆ, ಈ ತಡೆಯಾಜ್ಞೆ ದೇಶದಾದ್ಯಂತ ಅನ್ವಯವಾಗಬೇಕು ಎಂದು ಹೇಳಿದೆ.

ಅಧಿಸೂಚನೆಗೆ ತೀವ್ರ ಆಕ್ಷೇಪಗಳು ಕೇಳಿಬಂದಿರುವುದರಿಂದ ಬಂಡವಾಳಗಾರರಿಂದ ಸಲಹೆಗಳನ್ನು ಸ್ವೀಕರಿಸಿಕೊಂಡು ತಿದ್ದುಪಡಿ ಮಾಡಲಾಗುವುದು ಎಂದು ಸರ್ಕಾರ ಪ್ರಕಟಣೆ ನೀಡಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಜೆ.ಎಸ್‌. ಖೇಹರ್ ಅವರನ್ನೊಳಗೊಂಡ ನ್ಯಾಯಪೀಠ, ‘ಮದ್ರಾಸ್ ಹೈಕೋರ್ಟ್‌ನ ಮದುರೈ ಪೀಠ ನೀಡಿದ ಮಧ್ಯಂತರ ಆದೇಶವನ್ನು ದೇಶದಾದ್ಯಂತ ವಿಸ್ತರಿಸಬೇಕು’ ಎಂದು ಹೇಳಿದೆ.

ಈ ಮಧ್ಯೆ, ಅಧಿಸೂಚನೆಯ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ‘ಆಲ್ ಇಂಡಿಯಾ ಜಮೈತುಲ್ ಖುರೇಶಿ ಆ್ಯಕ್ಷನ್ ಕಮಿಟಿ’ ಸಲ್ಲಿಸಿದ್ದ ಮನವಿಯನ್ನು ನ್ಯಾಯಪೀಠ ತಿರಸ್ಕರಿಸಿದೆ.

ಪ್ರತಿಕ್ರಿಯಿಸಿ (+)