ಶುಕ್ರವಾರ, ಡಿಸೆಂಬರ್ 6, 2019
21 °C

ಐಪಿಎಲ್: ಇ ಹರಾಜು ಮನವಿ ಪರಿಶೀಲನೆ

Published:
Updated:
ಐಪಿಎಲ್: ಇ ಹರಾಜು ಮನವಿ ಪರಿಶೀಲನೆ

ನವದೆಹಲಿ:  ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಟಿ.ವಿ. ಪ್ರಸಾರದ ಹಕ್ಕು ಗಳನ್ನು ಇ–ಹರಾಜು ಮಾಡಬೇಕು ಎಂಬ  ಮನವಿಯ ಕುರಿತು ಚಿಂತನೆ ನಡೆ ಸುವುದಾಗಿ ಸುಪ್ರೀಂ ಕೋರ್ಟ್‌ ನ್ಯಾಯಪೀಠವು ತಿಳಿಸಿದೆ.

ಭಾರತೀಯ ಜನತಾ ಪಕ್ಷದ ಧುರೀಣ  ಸುಬ್ರಮಣಿಯಂ ಸ್ವಾಮಿ ಅವರು ಈ ಕುರಿತು ಸಲ್ಲಿಸಿರುವ ಮನವಿಯನ್ನು  ಮಂಗಳವಾರ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೆಹರ್ ಮತ್ತು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಪರಿಶೀಲಿಸಿದರು.

‘ಈ ವಿಚಾರದ ಕುರಿತು ಯೋಜನೆ ಮಾಡುತ್ತೇವೆ’ ಎಂದು ನ್ಯಾಯಮೂರ್ತಿ ಗಳು ಹೇಳಿದರು.

‘ಜುಲೈ 17ರಂದು ಐಪಿಎಲ್ ಪ್ರಸಾರದ ಹಕ್ಕುಗಳ ಹರಾಜು ಪ್ರಕ್ರಿಯೆ ನಡೆಯಲಿದೆ. ಸುಮಾರು ₹ 30 ಸಾವಿರ ಕೋಟಿ ಮೌಲ್ಯದ ವ್ಯವಹಾರ ಇದಾಗಿದೆ. ಆದ್ದರಿಂದ ಇ–ಹರಾಜು ಪದ್ಧತಿಯನ್ನು ಅಳವಡಿಸುವುದರಿಂದ ಪಾರದರ್ಶಕತೆ ಸಾಧ್ಯವಾಗುತ್ತದೆ’ ಎಂದು ಸ್ವಾಮಿ ತಮ್ಮ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಪ್ರತಿಕ್ರಿಯಿಸಿ (+)