ಬ್ರಿಸ್ಟನ್ : ಭಾರತ ವನಿತೆಯರ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಅವರು ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ವುಮನ್ ಆಗಿ ಹೊರ ಹೊಮ್ಮಿದರು. ಅವರು ಆರು ಸಾವಿರ ರನ್‌ಗಳ ಗಡಿಯನ್ನು ದಾಟಿದರು.
ಇಲ್ಲಿ ನಡೆಯುತ್ತಿರುವ ಮಹಿಳೆಯರ ವಿಶ್ವಕಪ್ ಟೂರ್ನಿಯಲ್ಲಿ ಬುಧವಾರ ಆಸ್ಟ್ರೇಲಿಯಾ ಎದುರು ಮಿಥಾಲಿ ರಾಜ್ (69ರನ್) ಅರ್ಧಶತಕ ದಾಖಲಿಸಿದರು. ಅದರೊಂದಿಗೆ ಇಂಗ್ಲೆಂಡ್‌ನ ಚಾರ್ಲೊಟ್ ಎಡ್ವರ್ಡ್ (5992 ರನ್) ಅವರ ದಾಖಲೆಯನ್ನು ಮೀರಿ ನಿಂತರು. ಮಿಥಾಲಿ ಅವರಿಗೆ ಇದು 183ನೇ ಏಕದಿನ ಪಂದ್ಯವಾಗಿದೆ.
ಈಚೆಗೆ ಭಾರತದ ಮಧ್ಯಮವೇಗಿ ಜೂಲನ್ ಗೋಸ್ವಾಮಿ ಅವರು 280 ವಿಕೆಟ್‌ಗಳಿಸುವ ಮೂಲಕ ವಿಶ್ವದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದೀಗ ಮಿಥಾಲಿ ಅವರು ಬ್ಯಾಟಿಂಗ್‌ನಲ್ಲಿ ದಾಖಲೆ ಬರೆದಿದ್ದಾರೆ.

ಮಗಳ ಸಾಧನೆಗೆ ಅಪ್ಪನ ಸಂತಸ
‘ಆಕೆಯ ಸಾಧನೆಯ ಬಗ್ಗೆ ನಾನು ಏನು ಹೇಳಲಿ? ನನಗೆ ಅಪಾರ ಸಂತಸವಾಗಿದೆ’ ಎಂದು ಮಿಥಾಲಿ ಅವರ ತಂದೆ ದೊರೈರಾಜ್ ಹೇಳಿದ್ದಾರೆ.
‘ಕಠಿಣ ಅಭ್ಯಾಸ ಮಾಡುವ ಮಿಥಾಲಿ ಗೆ ಸಾಧನೆ ಒಲಿದಿದೆ. ಪ್ರತಿಕ್ಷಣವೂ ಕೌಶಲ್ಯ ವೃದ್ದಿಯ ಕುರಿತ ಧ್ಯಾನದಲ್ಲಿರುವ ಮಿಥಾಲಿಗೆ ಇನ್ನೂ ಎತ್ತರದ ಸಾಧನೆ ಮಾಡುವ ಸಾಮರ್ಥ್ಯವಿದೆ’ ಎಂದರು.

ಮಿಥಾಲಿ ರಾಜ್ ಅರ್ಧಶತಕದ ಮಿಂಚು

69 - ರನ್

114 -ಎಸೆತ

04 -ಬೌಂಡರಿ

01 -ಸಿಕ್ಸರ್

60.52 -ಸ್ಟ್ರೈಕ್‌ರೇಟ್

6,000 ರನ್ ವನಿತೆಯರ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ವುಮನ್ ಹೆಗ್ಗಳಿಕೆ

5,992 ರನ್ ಇಂಗ್ಲೆಂಡ್‌ನ ಚಾರ್ಲೊಟ್ ಎಡ್ವರ್ಡ್ ಅವರ ಹೆಸರಿನಲ್ಲಿದ್ದ ಈ ದಾಖಲೆಯನ್ನು ಮಿಥಾಲಿ ಮೀರಿ ನಿಂತರು

1999 -ಐರ್ಲೆಂಡ್ ಎದುರು ಕೇನ್ಸ್‌ನಲ್ಲಿ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ವರ್ಷ.

55.52 - ಅತಿ ಹೆಚ್ಚು ರನ್ ಗಳಿಕೆಯ ಸರಾಸರಿ ಹೊಂದಿರುವ ವಿಶ್ವದ ಎರಡನೇ ಬ್ಯಾಟ್ಸ್‌ವುಮನ್. ಆಸ್ಟ್ರೇಲಿಯಾದ ಮೆಗ್‌ಲ್ಯಾನಿಂಗ್ (54.12) ಮತ್ತು ಎಲ್ಲೈಸ್ ಪೆರ್ರಿ (50,00) ಕ್ರಮವಾಗಿ ಮೊದಲ ಹಾಗೂ ಮೂರನೇ ಸ್ಥಾನದಲ್ಲಿದ್ದಾರೆ.

08 -ಏಕದಿನ ಕ್ರಿಕೆಟ್‌ನಲ್ಲಿ ಗಳಿಸಿರುವ ವಿಕೆಟ್‌ಗಳು

44 - ಏಕದಿನ ಕ್ರಿಕೆಟ್‌ನಲ್ಲಿ ಮಿಥಾಲಿ ಪಡೆದ ಕ್ಯಾಚ್‌ಗಳು

ವನಿತೆಯರ ಕ್ರಿಕೆಟ್‌ನಲ್ಲಿ ಮೈಲುಗಲ್ಲು ಸ್ಥಾಪನೆಯಾದ ದಿನ ಇದು. ಅತಿ ಹೆಚ್ಚು ಗಳಿಸಿದ ಮಿಥಾಲಿ ರಾಜ್ ಮತ್ತು ಕೆಲವು ದಿನಗಳ ಹಿಂದೆಹೆಚ್ಚು ವಿಕೆಟ್‌ಗಳನ್ನು ಗಳಿಸಿದ್ದ ಸಾಧಕಿ ಜೂಲನ್ ಗೋಸ್ವಾಮಿ ಇಬ್ಬರೂ ಭಾರತದವರು ಎನ್ನುವುದೇ ಅದ್ಭುತ.
ಡಯಾನಾ ಎಡುಲ್ಜಿ, ಸಿಒಎ ಸದಸ್ಯೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.