ಭಾನುವಾರ, ಡಿಸೆಂಬರ್ 8, 2019
24 °C

ಬ್ಯಾಂಕ್‌ಗಳಲ್ಲೂ ಆಧಾರ್‌ ಕೇಂದ್ರ

ಪಿಟಿಐ Updated:

ಅಕ್ಷರ ಗಾತ್ರ : | |

ಬ್ಯಾಂಕ್‌ಗಳಲ್ಲೂ ಆಧಾರ್‌ ಕೇಂದ್ರ

ನವದೆಹಲಿ: ಸಾರ್ವಜನಿಕ ಕ್ಷೇತ್ರದ ಮತ್ತು ಖಾಸಗಿ ಬ್ಯಾಂಕುಗಳು ತಮ್ಮ 10 ಶಾಖೆಗಳ ಪೈಕಿ ಕನಿಷ್ಠ ಒಂದು ಶಾಖೆಯಲ್ಲಿ ಆಧಾರ್ ನೋಂದಣಿಗೆ ವ್ಯವಸ್ಥೆ ಮಾಡಬೇಕು ಎಂದು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಸೂಚಿಸಿದೆ.

ಬ್ಯಾಂಕುಗಳಲ್ಲಿ ಆಧಾರ್ ಸಂಖ್ಯೆ ನೋಂದಣಿಗೆ ಅನುಕೂಲವಾಗುವಂತೆ ವ್ಯವಸ್ಥೆಯಲ್ಲಿ ಸೂಕ್ತ ಬದಲಾವಣೆಯನ್ನು ಮಾಡಲಾಗಿದೆ ಎಂದು ಪ್ರಾಧಿಕಾರದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ದೇಶದಲ್ಲಿ 25 ಸಾವಿರ ಆಧಾರ್ ಸಂಖ್ಯೆ ನೋಂದಣಿ ಕೇಂದ್ರಗಳಿದ್ದರೂ ಬ್ಯಾಂಕಿನಲ್ಲಿ ಒಂದೇ ಒಂದು ಕೇಂದ್ರವೂ ಇಲ್ಲ. ಆದ್ದರಿಂದ ಇನ್ನು ಮುಂದೆ ಬ್ಯಾಂಕುಗಳ ಆಯ್ದ ಶಾಖೆಗಳಲ್ಲಿ ಆಧಾರ್ ನೋಂದಣಿ ಮಾಡಲು ಸೂಚಿಸಲಾಗಿದೆ.

ಪ್ರತಿಕ್ರಿಯಿಸಿ (+)