ಭಾನುವಾರ, ಡಿಸೆಂಬರ್ 15, 2019
21 °C

ಸ್ಕ್ವಾಷ್‌:ಕ್ವಾರ್ಟರ್ ಫೈನಲ್‌ಗೆ ಸಂಧು

ಪಿಟಿಐ Updated:

ಅಕ್ಷರ ಗಾತ್ರ : | |

ಸ್ಕ್ವಾಷ್‌:ಕ್ವಾರ್ಟರ್ ಫೈನಲ್‌ಗೆ ಸಂಧು

ಚೆನ್ನೈ: ಅಮೋಘ ಆಟ ಆಡಿದ ಭಾರತದ ಹರಿಂದರ್‌ ಪಾಲ್‌ ಸಂಧು ಅವರು ಪಿಎಸ್‌ಎ ವಿಶ್ವ ಟೂರ್ ವಿಕ್ಟೋರಿಯಾ ಓಪನ್‌ ಸ್ಕ್ವಾಷ್‌ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಗುರುವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಪ್ರೀ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಸಂಧು 11–5, 11–7, 11–7ರಲ್ಲಿ ಸೈಯದ್‌ ಅಜ್ಲಾನ್‌ ಅಮ್ಜದ್‌ ಅವರನ್ನು ಪರಾಭವ ಗೊಳಿಸಿದರು.

ಬುಧವಾರ ರಾತ್ರಿ ನಡೆದಿದ್ದ ಪಂದ್ಯದಲ್ಲಿ 11–7, 11–1, 11–8ರಲ್ಲಿ ಆಸ್ಟ್ರೇಲಿಯಾದ ಜೇಕಬ್‌ ಫೋರ್ಡ್‌ ಅವರನ್ನು ಮಣಿಸಿ ವಿಶ್ವಾಸ ಹೆಚ್ಚಿಸಿಕೊಂಡಿದ್ದ ಸಂಧು 16ರ ಘಟ್ಟದ ಹೋರಾಟದಲ್ಲಿ ಮಿಂಚಿನ ಆಟ ಆಡಿದರು.ಇಲ್ಲಿ ನಾಲ್ಕನೇ ಶ್ರೇಯಾಂಕ ಹೊಂದಿರುವ ಭಾರತದ ಆಟಗಾರ ಶುರುವಿ ನಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದರು.

ಮೊದಲ ಗೇಮ್‌ನಲ್ಲಿ ಆಕರ್ಷಕ ಸರ್ವ್‌ ಮತ್ತು ಚುರುಕಿನ ರಿಟರ್ನ್‌ಗಳ ಮೂಲಕ ಎದುರಾಳಿಯ ಸವಾಲು ಮೀರಿದ ಸಂಧು, ಎರಡನೇ ಗೇಮ್‌ನಲ್ಲೂ ಅಮೋಘ ಸಾಮರ್ಥ್ಯ ತೋರಿ ಗೆಲುವು ಒಲಿಸಿಕೊಂಡರು.

ಪ್ರತಿಕ್ರಿಯಿಸಿ (+)