ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಫಿ ದಾರಾಶ ಕ್ರಿಕೆಟ್‌: ಪವನ್‌ ದೇಶಪಾಂಡೆ ಶತಕ

Last Updated 13 ಜುಲೈ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪವನ್‌ ದೇಶಪಾಂಡೆ ಅವರ ತಾಳ್ಮೆಯ ಶತಕದ ನೆರವಿನಿಂದ ಅಧ್ಯಕ್ಷರ ಇಲೆವೆನ್ ತಂಡದವರು ಶಫಿ ದರಾಶ ಟ್ರೋಫಿ ಕ್ರಿಕೆಟ್ ಟೂರ್ನಿಯ ಮೊದಲ ದಿನದ ಆಟ ಮುಗಿದಾಗ ಸುಭದ್ರ ಸ್ಥಿತಿಯಲ್ಲಿದ್ದಾರೆ.

ಕೆ.ಎಸ್‌.ಸಿ.ಎ ಆಲೂರು ಕ್ರೀಡಾಂಗಣದಲ್ಲಿ ಬುಧವಾರದ ಆಟ ಮುಕ್ತಾಯಗೊಂಡಾಗ ಈ ತಂಡ 90 ಓವರ್‌ಗಳಲ್ಲಿ ಎಂಟು ವಿಕೆಟ್‌ಗಳಿಗೆ 326 ರನ್‌ ಗಳಿಸಿತು. ಉತ್ತರವಾಗಿ ಉಪಾಧ್ಯಕ್ಷರ ಇಲೆವೆನ್ ತಂಡದವರು ಎಂಟು ಓವರ್‌ಗಳಲ್ಲಿ ಒಂದು ವಿಕೆಟ್‌ ಕಳೆದುಕೊಂಡು 23 ರನ್ ಗಳಿಸಿದ್ದಾರೆ.

ಮೊದಲು ಬ್ಯಾಟಿಂಗ್ ಮಾಡಿದ ಅಧ್ಯಕ್ಷರ ಇಲೆವೆನ್‌ಗೆ ಪವನ್ ದೇಶಪಾಂಡೆ ಉತ್ತಮ ಕಾಣಿಕೆ ನೀಡಿದರು. 214 ಎಸೆತಗಳಲ್ಲಿ 112 ರನ್ ಗಳಿಸಿದ ಅವರು ಎರಡು ಸಿಕ್ಸರ್ಸ್ ಮತ್ತು ಒಂಬತ್ತು ಬೌಂಡರಿ ಸಿಡಿಸಿದರು.

ಮತ್ತೊಂದು ಪಂದ್ಯದಲ್ಲಿ ಕಂಬೈನ್ಡ್‌ ಇಲೆವೆನ್‌ ತಂಡ 90 ಓವರ್‌ಗಳಲ್ಲಿ ಎಂಟು ವಿಕೆಟ್‌ಗಳಿಗೆ 331 ರನ್‌ ಗಳಿಸಿತು. ಬೆಂಗಳೂರು ವಲಯ ತಂಡ ಎಂಟು ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 25 ರನ್‌ ಗಳಿಸಿ ಸಂಕಷ್ಟದಲ್ಲಿದೆ.

ಸಂಕ್ಷಿಪ್ತ ಸ್ಕೋರ್‌

ಅಧ್ಯಕ್ಷರ ಇಲೆವೆನ್‌: 90 ಓವರ್‌ಗಳಲ್ಲಿ ಎಂಟು ವಿಕೆಟ್‌ಗಳಿಗೆ 326 (ಅರ್ಜುನ ಹೊಯ್ಸಳ 38, ಪವನ್ ದೇಶಪಾಂಡೆ 112, ಶ್ರೇಯಸ್ ಗೋಪಾಲ್‌ 83, ಕೆ.ಗೌತಮ್‌ 31, ಜೆ.ಸುಚಿತ್‌ 26; ಮಿತ್ರಕಾಂತ ಸಿಂಗ್ ಯಾದವ್‌ 99ಕ್ಕೆ2, ಪ್ರವೀಣ್‌ ದುಬೆ 82ಕ್ಕೆ3); ಉಪಾಧ್ಯಕ್ಷರ ಇಲೆವೆನ್‌: ಎಂಟು ಓವರ್‌ಗಳಲ್ಲಿ ಒಂದು ವಿಕೆಟ್‌ಗೆ 23.

ಕಂಬೈನ್ಡ್‌ ಇಲೆವೆನ್‌: 90 ಓವರ್‌ಗಳಲ್ಲಿ ಎಂಟು ವಿಕೆಟ್‌ಗಳಿಗೆ 331 (ಅರ್ಜುನ್ ಎಸ್‌.ಪಿ 26, ನಿಕಿನ್ ಜೋಸ್‌ 46, ಅಮನ್ ರಾಜ್‌ 51, ಶರತ್‌ ಬಿ.ಆರ್‌ 85, ಕೌಶಿಕ್ ವಿ 51, ಹರೀಶ್‌ ಕುಮಾರ್‌ 36; ಅಬ್ರಾರ್ ಖಾಜಿ 91ಕ್ಕೆ2, ಕೆ.ಸಿ.ಕಾರಿಯಪ್ಪ 89ಕ್ಕೆ4, ಸುನಿಲ್‌ರಾಜು 45ಕ್ಕೆ2); ಬೆಂಗಳೂರು ವಲಯ: ಎಂಟು ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 25 (ರಿತೇಶ್‌ ಭಟ್ಕಳ 9ಕ್ಕೆ3).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT