ಭಾನುವಾರ, ಡಿಸೆಂಬರ್ 15, 2019
21 °C

ಭಾರತದ ವಿರುದ್ಧ ಟಾಸ್‌ ಗೆದ್ದ ನ್ಯೂಜಿಲೆಂಡ್‌ ಬೌಲಿಂಗ್‌ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತದ ವಿರುದ್ಧ ಟಾಸ್‌ ಗೆದ್ದ ನ್ಯೂಜಿಲೆಂಡ್‌ ಬೌಲಿಂಗ್‌ ಆಯ್ಕೆ

ಡರ್ಬಿ: ಸತತ ಎರಡು ಪಂದ್ಯಗಳಲ್ಲಿ ಸೋಲು ಕಂಡಿರುವ ಭಾರತ ಮಹಿಳೆಯರ ತಂಡ ಶನಿವಾರ ಪ್ರಬಲ ನ್ಯೂಜಿಲೆಂಡ್ ಎದುರು ‘ಮಾಡು ಇಲ್ಲವೇ ಮಡಿ’ ಪಂದ್ಯ ಆಡಲಿದೆ.

ಭಾರತದ ಸೆಮಿಫೈನಲ್‌ ಕನಸು ನನಸಾಗಬೇಕಾದರೆ ಈ ಪಂದ್ಯ ಗೆದ್ದು ಕೊಳ್ಳುವುದು ಅನಿವಾರ್ಯವಾಗಿದೆ. ಸದ್ಯ ಭಾರತದ ವಿರುದ್ಧ ಟಾಸ್‌ ಗೆದ್ದ ನ್ಯೂಜಿಲೆಂಡ್‌ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಐದನೇ ಪಂದ್ಯದಲ್ಲಿ ಗೆಲುವು ದಾಖಲಿಸುವ ಸುಲಭ ಅವಕಾಶವನ್ನು ಭಾರತ ಕೈಚೆಲ್ಲಿತ್ತು. ಬಳಿಕ ಆಸ್ಟ್ರೇಲಿಯಾ ಎದುರು ಕೂಡ ನೀರಸವಾಗಿ ಆಡಿತ್ತು.

ನಾಲ್ಕು ಪಂದ್ಯಗಳ ಸತತ ಗೆಲುವಿನ ಬಳಿಕ ಕಂಡ ಎರಡು ಸೋಲುಗಳು ಮಿಥಾಲಿ ಪಡೆಯ ವಿಶ್ವಕಪ್‌ ಕನಸಿಗೆ ಪ್ರಮುಖ ಅಡ್ಡಿಯಾಗಿವೆ.

ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳಲ್ಲಿರುವ ಇಂಗ್ಲೆಂಡ್, ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಈಗಾಗಲೇ ಸೆಮಿಫೈನಲ್ ತಲುಪಿವೆ. ನಂತರದ ಸ್ಥಾನಗಳಲ್ಲಿರುವ ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿದೆ.

ಪ್ರತಿಕ್ರಿಯಿಸಿ (+)