ಶುಕ್ರವಾರ, ಡಿಸೆಂಬರ್ 13, 2019
21 °C

ಶಿವಮ್‌ ಮಿಶ್ರಾ ಶತಕದ ಆಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮ್‌ ಮಿಶ್ರಾ ಶತಕದ ಆಟ

ಬೆಂಗಳೂರು: ಶಿವಮ್ ಮಿಶ್ರಾ (144 ರನ್) ಅವರ ಅಮೋಘ ಶತಕದ ನೆರವಿನಿಂದ ಉಪಾಧ್ಯಕ್ಷರ ಇಲೆವನ್ ತಂಡ ಇಲ್ಲಿ ನಡೆದ ಶಫಿ ದಾರಾಶಾ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಸಂಯುಕ್ತ ಇಲೆವನ್‌ ಎದುರು ಉತ್ತಮ ಮೊತ್ತ ದಾಖಲಿಸಿದೆ.

ಮೊದಲು ಬ್ಯಾಟ್ ಮಾಡಿದ ಉಪಾಧ್ಯಧ್ಯಕ್ಷರ ಇಲೆವನ್ ತಂಡ 90 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 353 ರನ್ ಕಲೆಹಕಾಕಿತು. ಬಳಿಕ ಇನಿಂಗ್ಸ್ ಆರಂಭಿಸಿರುವ ಸಂಯುಕ್ತ ಇಲೆವನ್‌ 8 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 21 ರನ್‌ ಗಳಿಸಿದೆ.

ಉಪಾಧ್ಯಕ್ಷರ ಇಲೆವನ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಎನ್‌.ಜಿ ಸುಜಿತ್‌  45 ರನ್ ದಾಖಲಿಸಿ ಮಿಂಚಿದರು. ಶಿವಮ್ ಮಿಶ್ರಾ 211 ಎಸೆತಗಳನ್ನು ಎದುರಿಸಿ 13 ಬೌಂಡರಿ ಹಾಗೂ 4 ಸಿಕ್ಸರ್‌ಗಳನ್ನು ಸಿಡಿಸಿದರು.

ತಾಳ್ಮೆಯ ಇನಿಂಗ್ಸ್ ಕಟ್ಟಿದ ಶಿವಮ್ ರನ್ ವೇಗ ಹೆಚ್ಚಿಸಿದರು. ಕುನಾಲ್ ಕಪೂರ್ 42 ರನ್ ದಾಖಲಿಸಿದರೆ, ಶಿಶಿರ್ ಭವಾನೆ 28 ರನ್ ಗಳಿಸಿದರು. ವಿ. ಕೌಶಿಕ್ 67 ರನ್‌ಗಳನ್ನು ನೀಡಿ 2 ವಿಕೆಟ್ ಕಬಳಿಸಿದರು.

ಸಂಯುಕ್ತ ಇಲೆವೆನ್ ತಂಡದ ರನ್ ಹೊಳೆಯನ್ನು ತಡೆಯುವಲ್ಲಿ ಮಿತ್ರಕಾಂತ್ ಸಿಂಗ್ ಯಾದವ್ ಯಶಸ್ವಿಯಾದರು. ಈ ಆಟಗಾರ 7 ರನ್‌ಗಳಿಗೆ 2 ವಿಕೆಟ್ ಕಬಳಿಸಿದರು.

ಸಂಕ್ಷಿಪ್ತ ಸ್ಕೋರು: ಉಪಾಧ್ಯಕ್ಷರ ಇಲೆವೆನ್‌: 90 ಓವರ್‌ಗಳಲ್ಲಿ 6 ವಿಕೆಟ್‌ಗೆ 353 (ಎನ್‌. ಜಿ ಸುಜಿತ್‌ 45, ಶಿವಮ್‌ ಮಿಶ್ರಾ 144, ಕುನಾಲ್ ಕಪೂರ್‌ 42, ಶಿಶಿರ್ ಭವಾನೆ 28, ಅನಿರುದ್ಧ ಜೋಶಿ 39, ಪ್ರವೀಣ್‌ ದುಬೆ 23; ವಿ. ಕೌಶಿಕ್‌ 67ಕ್ಕೆ2). ಸಂಯುಕ್ತ ಇಲೆವೆನ್‌: 8 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 21.

ಬೆಂಗಳೂರು ವಲಯ: 60.1 ಓವರ್‌ಗಳಲ್ಲಿ 233 (ಸಮರ್ಥ್‌ ಊಟಿ 25, ಸುನಿಲ್ ರಾಜು 64, ನಾಗಭರತ್‌ 23, ಭಾವೇಶ್‌ ಗುಲೇಚ 43; ರೋನಿತ್ ಮೋರೆ 43ಕ್ಕೆ2, ಟಿ. ಪ್ರದೀಪ್‌ 56ಕ್ಕೆ2, ಜೀಶನ್‌ ಅಲಿ ಸಯ್ಯದ್ 38ಕ್ಕೆ3). ಅಧ್ಯಕ್ಷರ ಇಲೆವೆನ್‌: 26 ಓವರ್‌ಗಳಲ್ಲಿ 1 ವಿಕೆಟ್‌ಗೆ 151 (ಅರ್ಜುನ್ ಹೊಯ್ಸಳ 50, ಅಭಿಷೇಕ್ ರೆಡ್ಡಿ 75).

ಪ್ರತಿಕ್ರಿಯಿಸಿ (+)