ಶುಕ್ರವಾರ, ಡಿಸೆಂಬರ್ 6, 2019
17 °C

ಅವಧಿಗೂ ಮೊದಲು ದತ್‌ ಬಿಡುಗಡೆ: ಸರ್ಕಾರದ ಸಮರ್ಥನೆ

ಪಿಟಿಐ Updated:

ಅಕ್ಷರ ಗಾತ್ರ : | |

ಅವಧಿಗೂ ಮೊದಲು ದತ್‌ ಬಿಡುಗಡೆ: ಸರ್ಕಾರದ ಸಮರ್ಥನೆ

ಮುಂಬೈ: 1993ರ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದ ನಟ ಸಂಜಯ್‌ದತ್‌ ಅವರನ್ನು ಅವಧಿಗಿಂತ 8 ತಿಂಗಳು ಮೊದಲೇ ಜೈಲಿನಿಂದ ಬಿಡುಗಡೆ ಮಾಡಿದ್ದಕ್ಕೆ ಮಹಾರಾಷ್ಟ್ರ ಸರ್ಕಾರ  ಸೋಮವಾರ ಸಮರ್ಥನೆ ನೀಡಿದೆ.

ನಿಯಮದ ಪ್ರಕಾರವೇ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಅವರನ್ನು ವಿಶೇಷವಾಗಿ ಪರಿಗಣಿಸಿಲ್ಲ  ಎಂದು ಬಾಂಬೆ ಹೈಕೋರ್ಟ್‌ಗೆ ಸರ್ಕಾರ ತಿಳಿಸಿದೆ. ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಶಸ್ತ್ರಾಸ್ತ್ರ ಇರಿಸಿಕೊಂಡಿದ್ದಕ್ಕಾಗಿ ದತ್‌್ ಅವರಿಗೆ ಈ ಮೊದಲು ಐದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. 

ವಿಚಾರಣೆ ವೇಳೆ ಜಾಮೀನಿನಲ್ಲಿದ್ದ ದತ್‌, 2013ರ ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್‌್ ಶಿಕ್ಷೆ ಎತ್ತಿಹಿಡಿದ ಬಳಿಕ ನ್ಯಾಯಾಲಯಕ್ಕೆ ಶರಣಾಗಿದ್ದರು.

ಪುಣೆಯ ಯೆರವಾಡಾ ಜೈಲಿನಲ್ಲಿದ್ದ ದತ್‌ ಅವರನ್ನು ಸನ್ನಡತೆ ಆಧಾರದ ಮೇಲೆ, ಶಿಕ್ಷೆ ಅವಧಿ ಪೂರ್ಣಗೊಳ್ಳುವ ಮೊದಲೇ 2016ರ ಫೆಬ್ರುವರಿಯಲ್ಲಿ ಬಿಡುಗಡೆ ಮಾಡಲಾಗಿತ್ತು.

‘ದೈಹಿಕ ತರಬೇತಿ, ಶೈಕ್ಷಣಿಕ ಕಾರ್ಯಕ್ರಮಗಳು ಸೇರಿದಂತೆ ಹಲವು ಚಟುವಟಿಕೆಗಳಲ್ಲಿ ಭಾಗವಹಿಸಿದ್ದಕ್ಕಾಗಿ ಹಾಗೂ ಸನ್ನಡತೆ, ಶಿಸ್ತಿನ ವರ್ತನೆಯಿಂದಾಗಿ’ ದತ್‌್ ಅವರನ್ನು ಅವಧಿಗೆ ಮೊದಲೇ ಬಿಡುಗಡೆ ಮಾಡಲಾಯಿತು ಎಂದು ನ್ಯಾಯಮೂರ್ತಿಗಳಾದ ಆರ್‌.ಎಂ. ಸಾವಂತ್‌್ ಹಾಗೂ ಸಾಧನ ಜಾಧವ್ ಅವರನ್ನೊಳಗೊಂಡ ನ್ಯಾಯಪೀಠಕ್ಕೆ ಸಲ್ಲಿಸಿದ ವರದಿಯಲ್ಲಿ ಸರ್ಕಾರ ಉಲ್ಲೇಖಿಸಿದೆ.

ಪ್ರತಿಕ್ರಿಯಿಸಿ (+)