ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಮಾಂಸ ರಫ್ತು ಮಾಡುವ ವಿಶ್ವದ ಮೂರನೇ ಅತಿ ದೊಡ್ಡ ರಾಷ್ಟ್ರ ಭಾರತ

Last Updated 29 ಜುಲೈ 2017, 8:58 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ಅತಿ ಹೆಚ್ಚು ಗೋಮಾಂಸ ರಫ್ತು ಮಾಡುವ ವಿಶ್ವದ ಮೂರನೇ ಅತಿ ದೊಡ್ಡ ರಾಷ್ಟ್ರ ಭಾರತ ಎಂಬುದು ಆಹಾರ ಮತ್ತು ಕೃಷಿ ಸಂಘಟನೆ (ಎಫ್‌ಎಒ) ಮತ್ತು ಆರ್ಥಿಕ ಸಹಕಾರ ಸಂಘಟನೆ (ಒಇಸಿಡಿ) ಸಿದ್ಧಪಡಿಸಿರುವ ವರದಿಯಿಂದ ತಿಳಿದುಬಂದಿದೆ.

ಕಳೆದ ವರ್ಷ ಭಾರತವು 15.6 ಲಕ್ಷ ಟನ್ ಗೋಮಾಂಸ ರಫ್ತು ಮಾಡಿದೆ ಎಂದು ಒಇಸಿಡಿ–ಎಫ್‌ಎಒ ಕೃಷಿ ಮೇಲ್ನೋಟ ವರದಿಯಲ್ಲಿ (2017–2026) ಹೇಳಲಾಗಿದೆ. ಜತೆಗೆ, 2026ರ ವೇಳೆಗೆ 19.3 ಲಕ್ಷ ಟನ್ ಗೋಮಾಂಸ ರಫ್ತು ಮಾಡುವ ಮೂಲಕ ಅತಿ ಹೆಚ್ಚು ಗೋಮಾಂಸ ರಫ್ತು ಮಾಡುವ ವಿಶ್ವದ ಮೂರನೇ ಅತಿ ದೊಡ್ಡ ರಾಷ್ಟ್ರದ ಸ್ಥಾನವನ್ನು ಭಾರತ ಕಾಯ್ದುಕೊಳ್ಳಲಿದೆ. ವಿಶ್ವದ ಒಟ್ಟು ಗೋಮಾಂಸ ರಫ್ತಿನ ಪೈಕಿ ಶೇಕಡ 16ರಷ್ಟು ಪಾಲು ಭಾರತದ್ದಾಗಿರಲಿದೆ.

ಒಇಸಿಡಿ ಅಂಕಿಅಂಶಗಳ ಪ್ರಕಾರ, ಕಳೆದ ವರ್ಷ ಭಾರತ 3.63 ಲಕ್ಷ ಟನ್ ಗೋಮಾಂಸ ಆಮದು ಮಾಡಿಕೊಂಡಿದೆ. ಇದೇ ಪ್ರಮಾಣ ಮುಂದಿನ ಒಂದು ದಶಕದವರೆಗೂ ಇರಲಿದೆ ಎಂದು ಅಂದಾಜಿಸಲಾಗಿದೆ.

ಒಟ್ಟಾರೆಯಾಗಿ 2016ರಲ್ಲಿ ವಿಶ್ವದಾದ್ಯಂತ 1 ಕೋಟಿ ಟನ್‌ಗೂ ಹೆಚ್ಚು ಗೋಮಾಂಸ ರಫ್ತು ಮಾಡಲಾಗಿದ್ದು, 2026ರ ವೇಳೆಗೆ ಇದು 1.24 ಕೋಟಿ ಟನ್‌ಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ. ವರದಿಯ ಪ್ರಕಾರ, ಗೋಮಾಂಸ ರಫ್ತಿನಲ್ಲಿ ಬ್ರೆಜಿಲ್‌ ಮುಂಚೂಣಿಯಲ್ಲಿದ್ದರೆ, ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT