ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

’ಜೈ ಲವ–ಕುಶ’ ಎರಡನೇ ಟ್ರೇಲರ್

Last Updated 27 ಆಗಸ್ಟ್ 2017, 10:04 IST
ಅಕ್ಷರ ಗಾತ್ರ

ಜೂನಿಯರ್ ಎನ್.ಟಿ.ಆರ್ ಅಭಿನಯದ ‘ಜೈ ಲವ ಕುಶ’ ಚಿತ್ರದ 2ನೇ ಟ್ರೇಲರ್ ಯೂಟ್ಯೂಬ್‌ನಲ್ಲಿ ಬಿಡುಗಡೆ ಆಗಿದೆ. ಸಿನಿಮಾದ ಮೂರು ಪಾತ್ರಗಳಲ್ಲಿ ಒಂದಾದ ‘ಲವ’ ಪಾತ್ರ ಪರಿಚಯವನ್ನು ಟ್ರೇಲರ್‌ ಮಾಡಿಕೊಡುತ್ತದೆ.

ಜುಲೈ 6 ರಂದು ಬಿಡುಗಡೆ ಆಗಿದ್ದ ಚಿತ್ರದ ಮೊದಲ ಟ್ರೇಲರ್‌ನಲ್ಲಿ ರಾವಣನಾಗಿ ಮಿಂಚಿದ್ದ  ಜ್ಯೂನಿಯರ್ ಎನ್.ಟಿ.ಆರ್ ಹೊಸ ಟ್ರೇಲರ್‌ನಲ್ಲಿ ಸತ್ಪ್ರಜೆಯಾಗಿ ಕಾಣಿಸಿಕೊಂಡಿದ್ದಾರೆ. ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುವ ಲವ ಪಾತ್ರಧಾರಿ ಒಳ್ಳೆಯತನವೇ ಮೈವೆತ್ತವನು, ಆದರೆ ಅದರಿಂದಲೇ ಅವನ ಜೀವಕ್ಕೆ ಕೆಡುಕುಂಟಾಗುತ್ತದೆ ಎಂಬುದನ್ನು ಟ್ರೇಲರ್ ಹೇಳುತ್ತದೆ. ಲವನ ಮುಂದಿನ ಹೆಜ್ಜೆ ನೋಡಲು ಸಿನಿಮಾ ಬಿಡುಗಡೆ ಆಗುವವರೆಗೆ ಕಾಯಬೇಕು.

‘ಜೈ ಲವ ಕುಶ’ ಜೂನಿಯರ್ ಎನ್.ಟಿ.ಆರ್ ತ್ರಿಪಾತ್ರದಲ್ಲಿ ಕಾಣಿಸಿಕೊಂಡಿರುವ ಚಿತ್ರ. ಮೊದಲೆರಡು ಟ್ರೇಲರ್‌ಗಳಲ್ಲಿ ಜೈ ಮತ್ತು ಲವ ಪಾತ್ರಗಳ ಪರಿಚಯ ಮಾಡಿಸಿರುವ ಚಿತ್ರತಂಡ ಮುಂದಿನ ಟ್ರೇಲರ್‌ನಲ್ಲಿ ಕುಶ ಪಾತ್ರದ ಪರಿಚಯ ಮಾಡಿಸಲಿದ್ದಾರಂತೆ. ಮೂರು ಪಾತ್ರಕ್ಕೆ ಭಿನ್ನ ಲುಕ್ ಮಾಡಿರುವುದು ಹಾಲಿವುಡ್ ಮೇಕಪ್‌ಮನ್ ವ್ಯಾನ್ಸ್ ಹಾರ್ಟ್‌ವೆಲ್. ಆಸ್ಕರ್‌ ವಿಜೇತ ಚಿತ್ರ ‘ಲಾರ್ಡ್ ಆಫ್ ದಿ ರಿಂಗ್ಸ್ ಟ್ರೈಯಾಲಜಿ’ ಚಿತ್ರಕ್ಕೆ ಮೇಕಪ್‌ ಕಲಾವಿದನಾಗಿ ಕೆಲಸ ಮಾಡಿದ ಗರಿಮೆ ಇವರ ಬೆನ್ನಿಗಿದೆ.

ಲವ ಕುಶ ಹೆಸರಿನಿಂದ ಇದು ಅಣ್ಣ–ತಮ್ಮಂದಿರ ಕತೆಯುಳ್ಳ ಸಿನಿಮಾ ಎಂದು ಅಂದಾಜಿಸಿದ್ದ ಎನ್.ಟಿ.ಆರ್ ಅಭಿಮಾನಿಗಳು ಸಿನಿಮಾದ ಟ್ರೇಲರ್‌ಗಳನ್ನು ನೋಡಿ ಗೊಂದಳಕ್ಕೊಳಗಾಗುವುದು ಗ್ಯಾರಂಟಿ.

‘ಜೈ ಲವ ಕುಶ’ ಚಿತ್ರವನ್ನು ಕೆ.ಎಸ್.ರವೀಂದ್ರ ನಿರ್ದೇಶಿಸಿದ್ದಾರೆ. ಎನ್.ಟಿ.ಆರ್ ಅವರೇ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರ ಸೆಪ್ಟೆಂಬರ್ 21ಕ್ಕೆ ಬಿಡುಗಡೆ ಆಗಲಿದೆ. ಆಗಸ್ಟ್ 24 ರಂದು ಬಿಡುಗಡೆ ಆದ 45 ಸೆಕೆಂಡ್‌ನ ಟ್ರೇಲರ್ ಅನ್ನು ಈವರೆಗೆ 47 ಲಕ್ಷ ಮಂದಿ ವೀಕ್ಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT