ಕರ್ನಾಟಕದಲ್ಲಿ ಜೀವ ಬೆದರಿಕೆ ಸಾಮಾನ್ಯ ಸಂಗತಿ: ಗೌರಿ ಲಂಕೇಶ್‌

6
ಐದು ತಿಂಗಳ ಹಿಂದಷ್ಟೇ ಸಮಾರಂಭದಲ್ಲಿ ಹೇಳಿದ್ದರು

ಕರ್ನಾಟಕದಲ್ಲಿ ಜೀವ ಬೆದರಿಕೆ ಸಾಮಾನ್ಯ ಸಂಗತಿ: ಗೌರಿ ಲಂಕೇಶ್‌

Published:
Updated:
ಕರ್ನಾಟಕದಲ್ಲಿ ಜೀವ ಬೆದರಿಕೆ ಸಾಮಾನ್ಯ ಸಂಗತಿ: ಗೌರಿ ಲಂಕೇಶ್‌

ಬೆಂಗಳೂರು: 'ಕರ್ನಾಟಕದಲ್ಲಿ ಜೀವ ಬೆದರಿಕೆ ಎಂಬುದೀಗ ಸಾಮಾನ್ಯ ಸಂಗತಿಯಾಗಿಬಿಟ್ಟಿದೆ' ಎಂದು ಐದು ತಿಂಗಳ ಹಿಂದಷ್ಟೇ ಸಾರ್ವಜನಿಕ ಸಮಾರಂಭವೊಂದರಲ್ಲಿ ಗೌರಿ ಲಂಕೇಶ್ ಹೇಳಿದ್ದರು.

ದೆಹಲಿಯಲ್ಲಿ ನಡೆದ ಮಾನವ ಹಕ್ಕು ಹೋರಾಟಗಾರರ ಸಮಾವೇಶವೊಂದರಲ್ಲಿ ಮಾತನಾಡಿದ ಅವರು ಕರ್ನಾಟಕ ತನ್ನ ವೈಚಾರಿಕ ಪರಂಪರೆಯಿಂದ ಕೋಮುವಾದದ ಕಡೆಗೆ ನಡೆದ ಹಾದಿಯನ್ನು ಗುರುತಿಸಿ ಮಾತನಾಡಿದ್ದರು.

'ಅನಂತಮೂರ್ತಿ, ಲಂಕೇಶ್, ತೇಜಸ್ವಿ ಮುಂತಾದವರೆಲ್ಲಾ ಜವಹರಲಾಲ್ ನೆಹರು, ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿಯ ಕಟು ಟೀಕಾಕಾರರಾಗಿದ್ದರೂ ಯಾವತ್ತೂ ದೈಹಿಕ ಹಲ್ಲೆಯನ್ನು ಎದುರಿಸಬೇಕಾಗಿ ಬಂದಿರಲಿಲ್ಲ. ಜೀವ ಬೆದರಿಕೆಯಂಥದ್ದು ಅವರ ಹತ್ತಿರವೂ ಸುಳಿದಿರಲಿಲ್ಲ.' ಎಂದು ತಮ್ಮ ಭಾಷಣದಲ್ಲಿ ಹೇಳಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry