7
ಟ್ರೈಲರ್‌

‘ಹಂಬಲ್‌’ ಲಾಂಗ್ವೆಜ್‌ ಪಾಲಿಟಿಕ್ಸ್‌!

Published:
Updated:
‘ಹಂಬಲ್‌’ ಲಾಂಗ್ವೆಜ್‌ ಪಾಲಿಟಿಕ್ಸ್‌!

ನಮಸ್ಕಾರ ಡಿಯರ್‌ ಫ್ರೆಂಡ್ಸ್‌.. ನನ್ನೆಸ್ತು ನೋಗ್ರಾಜ್‌ ಅಂತ... ಐಆ್ಯಮ್‌ ಯುವರ್‌ ಹಂಬಲ್‌ ಹಂಬಲ್‌ ಹಂಬಲ್‌ ಪೊಲಿಟಿಷಿಯನ್‌’

– ಕೈಮುಗಿದುಕೊಂಡು ಹೇಳುವ ನಾಟಕೀಯತೆಯಲ್ಲಿಯೇ ಅವನ ಕಪಟತೆಯೂ ವ್ಯಕ್ತವಾಗುತ್ತದೆ. ಆ ವ್ಯಂಗ್ಯವನ್ನೇ ವ್ಯಂಗ್ಯ ಮಾಡುವಂತೆ ಹಣ್ಣು ಹಣ್ಣುಮುದುಕನೊಬ್ಬ ಜೀವದ ಉಸಿರೆಲ್ಲವ ಬಾಯಿಗೆ ತಂದುಕೊಂಡು ‘ಹಂಬಲ್‌ ಅಂದ್ರೆ...’ ಎಂದು ಕೇಳುತ್ತಾನೆ.

ಸೋಮವಾರ ಸಂಜೆ ಯೂಟ್ಯೂಬ್‌ಗೆ ಬಿಡುಗಡೆಯಾದ ದಾನ್‌ ಶೇಟ್‌ ನಿರ್ದೇಶನದ ‘ಹಂಬಲ್‌ ಪೊಲಿಟಿಷಿಯನ್‌ ನಾಗರಾಜ್‌’ ಸಿನಿಮಾದ ಟ್ರೇಲರ್‌ ಅನ್ನು ಸಾಮಾಜಿಕ ಜಾಲತಾಣಿಗರು ಚಪ್ಪರಿಸಿಕೊಂಡು ನೋಡುತ್ತಿದ್ದಾರೆ. ಕೇವಲ 18 ಗಂಟೆಗಳಲ್ಲಿ ಸುಮಾರು 1.8 ಲಕ್ಷ ವ್ಯೂಸ್ ಸಿಕ್ಕಿದೆ.

ಮೇಲುನೋಟಕ್ಕೆ ಇದೊಂದು ರಾಜಕೀಯ ವಿಡಂಬನೆಯ ಚಿತ್ರ. ಕಪಟ ರಾಜಕಾರಣಿಯೊಬ್ಬನ ಮೂಲಕ ಇಂದಿನ ರಾಜಕೀಯಕ್ಕೆ ವ್ಯಂಗ್ಯಕನ್ನಡಿ ಹಿಡಿಯುವ ಪ್ರಯತ್ನ ಎಂಬುದು ತಿಳಿಯುವಂತಿದೆ.

ಟ್ರೇಲರ್‌ ಮಧ್ಯದಲ್ಲಿ ನಾಗರಾಜ್‌ ‘ಇದು ಒಂದು ಸಕ್ಸೆಸ್‌ಫುಲ್‌ ಎಂಟರ್‌ಟೈನ್‌ಮೆಂಟ್‌ ಷೋ ಆಗ್ಬೇಕು’ ಎಂದು ಹೇಳುವಂತೆ ಈ ಸಿನಿಮಾವೂ ಒಂದು ಸಕ್ಸೆಸ್‌ಫುಲ್ ಎಂಟಟೈನ್ಮೆಂಟ್‌ ಷೋ ಆಗಲು ಏನೇನು ಬೇಕೋ ಅದೆಲ್ಲ ಮಸಾಲೆಗಳ ಇರುವ ಸೂಚನೆಯೂ ಚಿತ್ರದಲ್ಲಿಯೇ ಸಿಗುತ್ತದೆ.

ನಾಗರಾಜ್‌ನ ಬಹುತೇಕ ಎಡಬಿಡಂಗಿ ಇಂಗ್ಲಿಷ್‌ನಲ್ಲಿಯೇ ಮಾತನಾಡುತ್ತಾನೆ. ಅದು ಎಲ್ಲಿ ಅರ್ಥ ಆಗುವುದಿಲ್ಲವೋ ಎಂಬ ಕಾಳಜಿಯಿಂದ ಅವನ ಇಂಗ್ಲಿಷ್‌ ಮಾತಿಗೆ ಇಂಗ್ಲಿಷಿನಲ್ಲಿಯೇ ಸಬ್‌ಟೈಟಲ್‌ ಅನ್ನೂ ಕೊಡಲಾಗಿದೆ! (ಕನ್ನಡ ಮಾತ್ರ ಬರುವವರ ಪಾಡೇನು ಎಂದೆಲ್ಲ ಕೇಳುವಂತಿಲ್ಲ). ಅವನ ವಟವಟ ಕನ್ನಡ ಲೇಪಿತ ಇಂಗ್ಲೀಷ್‌ ಡೈಲಾಗ್‌ಗಳ ಜಡಿ ಮಳೆಯ ಮಧ್ಯದಲ್ಲಿಯೇ ರೋಜರ್‌ ನಾರಾಯಣ್‌ ಅವರ ಶುದ್ಧ ಕನ್ನಡ, ಶ್ರುತಿ ಹರಿಹರನ್‌ ಅವರ ಮುಕ್ತ ನಗುಮುಖ ತಂಗಾಳಿಯಂತೇ ಹಾದುಹೋಗುತ್ತದೆ.

ಚಿತ್ರದ ನಡುವಿಲ್ಲಯೇ ‘ಹಂಬಲ್‌ ಪೊಲಿಟಿಷಿಯನ್‌ ನಾಗರಾಜ್‌’ ನಿಮ್ಮನ್ನು ಇಂಗ್ಲಿಷಿನಲ್ಲಿಯೇ ಅವನ ‘ಪಾರ್ಟಿ’ಗೆ ನಿಮ್ಮನ್ನು ಆಹ್ವಾನಿಸುತ್ತಾನೆ. ಹೋಗಲಿಚ್ಛಿಸುವವರಿಗೆ ಕನ್ನಡ ಬರದಿದ್ರೆ... ‘ಇಟ್ಸ್‌ ಓಕೆ...’ ಇಂಗ್ಲಿಷ್‌ ಗೊತ್ತಿರುವುದು ಕಡ್ಡಾಯ!!

ಸದ್ಯಕ್ಕೆ  ಈ ಹಂಬಲ್‌ ಪಾಲಿಟಿಷಿಯನ್‌ನ ಓತಪ್ರೋತ ಭಾಷಣವನ್ನು ಸಾಮಾಜಿಕ ಜಾಲತಾಣಗಳಲ್ಲಿಯಂತೂ ಜನರು ಮತ್ತೆ ಮತ್ತೆ ಕೇಳುತ್ತಿದ್ದಾರೆ. ಹಿರಿತೆರೆಯ ಮೇಲಿನ ದೊಡ್ಡ ಚುನಾವಣೆಯಲ್ಲಿ ಎಷ್ಟು ಮತ ಬೀಳುವುದೋ ಕಾದು ನೋಡಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry