5

ವಿದೇಶಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಯುವಕ ಪೊಲೀಸ್ ವಶಕ್ಕೆ

Published:
Updated:
ವಿದೇಶಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಯುವಕ ಪೊಲೀಸ್ ವಶಕ್ಕೆ

ಮಂಗಳೂರು: ನಗರದ ಕಾಲೇಜು ಒಂದರಲ್ಲಿ ವ್ಯಾಸಂಗ ಮಾಡುತ್ತಿರುವ ಜರ್ಮನಿಯ ವಿದ್ಯಾರ್ಥಿನಿ ಮೇಲೆ ದೇರಳಕಟ್ಟೆಯ ಪನ್ನೀರು ಎಂಬಲ್ಲಿ ಶನಿವಾರ ಸಂಜೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ‌ ಯುವಕನೊಬ್ಬನನ್ನು ಸಾರ್ವಜನಿಕರೇ ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.



ಶನಿವಾರ ಸಂಜೆ ತರಗತಿಗಳನ್ನು ಮುಗಿಸಿಕೊಂಡು ಯುವತಿ ನಡೆದು ಹೋಗುತ್ತಿದ್ದರು. ಆಕೆಯನ್ನು ಹಿಂಬಾಲಿಸಿ ಬಂದ ಯುವಕ ಪನ್ನೀರು ಜಂಕ್ಷನ್ ಬಳಿ ಎಳೆದಾಡಿದ್ದಾನೆ.



ಯುವತಿ ಜೋರಾಗಿ ಕೂಗುತ್ತಿದ್ದಂತೆ ಸ್ಥಳೀಯರು ಬೆನ್ನಟ್ಟಿ ಆರೋಪಿ ಯುವಕನನ್ನು ಹಿಡಿದಿದ್ದಾರೆ. ಬಳಿಕ ಉಳ್ಳಾಲ ಠಾಣೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry