ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ ವಶಕ್ಕೆ ಸಿರಿಯಾ ಪಟ್ಟಣ

Last Updated 1 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೈರೂತ್‌: ಧಾರ್ಮಿಕ ಸಹಬಾಳ್ವೆಗೆ ಹೆಸರಾಗಿದ್ದ ಸಿರಿಯಾದ ಅಲ್‌ ಕ್ವಾರಿಟೈನ್‌ ಎಂಬ ಪಟ್ಟಣವನ್ನು ಇಸ್ಲಾಮಿಕ್ ಸ್ಟೇಟ್‌ ಉಗ್ರರು ಭಾನುವಾರ ವಶಪಡಿಸಿಕೊಂಡಿದ್ದಾರೆ. ಈ ಪಟ್ಟಣದಲ್ಲಿ ಸರ್ಕಾರಿ ಪಡೆಗಳ ಮೇಲೆ ಆಶ್ಚರ್ಯಕರ ರೀತಿಯಲ್ಲಿ ಉಗ್ರರು ದಾಳಿ ಮಾಡಿದ್ದರು.

ಹಾಮ್ಸ್‌ ಪ್ರಾಂತ್ಯದಲ್ಲಿನ ಈ ಪಟ್ಟಣ ಉಗ್ರರ ಪಾಲಾಗಿರುವ ವಿಷಯವನ್ನು ಸಿರಿಯಾದ ಮಾನವ ಹಕ್ಕುಗಳ ಕಣ್ಗಾವಲು ಸಮಿತಿ ಬಹಿರಂಗಪಡಿಸಿದೆ. ಸರ್ಕಾರಿ ಪಡೆಗಳು ಪಟ್ಟಣವನ್ನು ಸುತ್ತುವರಿದಿವೆ.

ಉಗ್ರರು ನುಸುಳಿದ ನಂತರ ಅಲ್‌ ಕ್ವಾರಿಟೈನ್‌ನಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು ಎಂದು ಬ್ರಿಟನ್‌ ಮೂಲದ ಕಣ್ಗಾವಲು ಸಮಿತಿಯ ರಮಿ ಅಬ್ದೆಲ್‌ ರೆಹಮಾನ್‌ ಹೇಳಿದ್ದಾರೆ.

2011ರಲ್ಲಿ ಸಿರಿಯಾದಲ್ಲಿ ಯುದ್ಧ ಆರಂಭವಾಗುವುದಕ್ಕಿಂತ ಮೊದಲು ಅಲ್‌ ಕ್ವಾರಿಟೈನ್‌ ಪಟ್ಟಣದಲ್ಲಿ 30 ಸಾವಿರ ಜನರಿದ್ದರು. ಇವರಲ್ಲಿ 900 ಮಂದಿ ಕ್ರೈಸ್ತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT