ರೈಲಿನಲ್ಲಿ ಅಪರಿಚಿತರಿಂದ ಥಳಿತ

ಭಾನುವಾರ, ಮೇ 26, 2019
28 °C

ರೈಲಿನಲ್ಲಿ ಅಪರಿಚಿತರಿಂದ ಥಳಿತ

Published:
Updated:

ಮುಜಫ್ಫರ್‌ನಗರ : ದೆಹಲಿ– ಹರಿದ್ವಾರ ಮಾರ್ಗದ ರೈಲಿನಲ್ಲಿ ಸೀಟು ಬಿಟ್ಟುಕೊಡದ ಸಲುವಾಗಿ 12 ಪುರುಷರಿದ್ದ ತಂಡವು ಒಂದೇ ಕುಟುಂಬದ ಮೂವರನ್ನು ಥಳಿಸಿದ ಘಟನೆ ಬವೋಲಿ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಜಾವೇದ್ ಹಾಗೂ ಅವರ ಪತ್ನಿ ಜುಮಾ ಬೇಗಮ್, ಜುಮಾ ಅವರ ಸೋದರಿ ರೇಷ್ಮಾ ಥಳಿತಕ್ಕೊಳಗಾದವರು. ಥಾಣಾ ಭವನ್ ನಿಲ್ದಾಣದಿಂದ ಲೋನಿಗೆ ಹೊರಟಿದ್ದ ಇವರು, ದಾಳಿ ನಡೆದಿದ್ದರಿಂದ ಬವೋಲಿ ರೈಲು ನಿಲ್ದಾಣದಲ್ಲೇ ಇಳಿದುಕೊಂಡಿದ್ದಾರೆ.

‘ಸೀಟು ತೆರವು ಮಾಡುವಂತೆ ಒತ್ತಾಯಿಸಿ ಅಪರಿಚಿತರ ಗುಂಪಿನಿಂದ ದಾಳಿಗೆ ಒಳಗಾದ ಸಂತ್ರಸ್ತರು ದೂರು ನೀಡಿದ್ದಾರೆ. ಆರೋಪಿ

ಗಳಿಗಾಗಿ ಶೋಧ ನಡೆದಿದೆ’ ಎಂದು ಬರೌತ್ ರೈಲ್ವೆ ಪೊಲೀಸ್ ಅಧಿಕಾರಿ ಸುಖಪಾಲ್ ಸಿಂಗ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry