ಹರೆಯದ ಬದುಕಿನ ನವಿರಾದ ಎಳೆ

ಬುಧವಾರ, ಜೂನ್ 19, 2019
31 °C
ಹಿಟ್‌ ಹಾಡು

ಹರೆಯದ ಬದುಕಿನ ನವಿರಾದ ಎಳೆ

Published:
Updated:
ಹರೆಯದ ಬದುಕಿನ ನವಿರಾದ ಎಳೆ

ಅಮೀರ್‌ ಖಾನ್ ಮತ್ತು ಕಿರಣ್ ರಾವ್ ನಿರ್ಮಿಸುತ್ತಿರುವ ‘ಸೀಕ್ರೆಟ್‌ ಸೂಪರ್ ಸ್ಟಾರ್’ ಸಿನಿಮಾದ ಮತ್ತೆರಡು ಹಾಡುಗಳು ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿವೆ. ‘ಸಪ್ನೆ ರೇ’ ಹಾಗೂ ‘ಐ ವಿಲ್ ಮಿಸ್ ಯು’ ಎಂಬ ಎರಡು ಹಾಡುಗಳು ಸಾಮಾಜಿಕ ಜಾಲತಾಣಗಳಲ್ಲಿ ಒಳ್ಳೆಯ ಪ್ರತಿಕ್ರಿಯೆ ಪಡೆಯುತ್ತಿವೆ.

ಸೀಕ್ರೆಟ್‌ ಸೂಪರ್ ಸ್ಟಾರ್‌ ಸಿನಿಮಾದಲ್ಲಿ ಹಾಡುಗಳಿಗೆ ಪ್ರಮುಖ ಸ್ಥಾನವಿದೆ. ಸಿನಿಮಾ ಕಥೆಯನ್ನು ಹಾಡುಗಳೇ ಹೊತ್ತು ಹೋಗುತ್ತವೆ. ಈಗಾಗಲೇ ಸಿನಿಮಾದ ಎರಡು ಹಾಡುಗಳು ಬಿಡುಗಡೆಯಾಗಿದ್ದು, ಮತ್ತೆರಡು ಹಾಡಿನಿಂದ ಹೆಚ್ಚುಕಡಿಮೆ ಸಿನಿಮಾದ ಸಂಪೂರ್ಣ ಕಥೆಯನ್ನು ಊಹಿಸಬಹುದು.

‘ಐ ವಿಲ್‌ ಮಿಸ್ ಯು’ ಹಾಡಿನಲ್ಲಿ ಹೈಸ್ಕೂಲ್‌ನಲ್ಲಿ ಮೊದಮೊದಲಾಗುವ ಪ್ರೇಮದ ನವಿರು ಎಳೆಗಳು ಇವೆ. ಹೊಸದಾಗಿ ಪ್ರಪಂಚವನ್ನು ಕಾಣುವ ಕಣ್ಣಿನ ಕೌತುಕ, ಮೊದಲ ಪ್ರೇಮದ ಸಂಭ್ರಮ, ಒಬ್ಬರನ್ನು ಒಬ್ಬರು ಅರಿಯುವ ಮುದ್ದಾದ ಹುಡುಗ ಹುಡುಗಿಯರ ಪ್ರಣಯ ಗೀತೆ. ಶಾಲಾ ಸಮವಸ್ತ್ರದಲ್ಲೇ ಗೆಳೆಯನೊಂದಿಗೆ ಓಡಾಡುವುದು, ಪಾರ್ಕ್‌ನಲ್ಲಿ ಆಟವಾಡುವುದು ಈ ಎಲ್ಲಾ ದೃಶ್ಯಗಳಲ್ಲಿ ಗೆಳೆತನ ಮತ್ತು ಪ್ರೇಮದ ನಡುವಿನ ಸಿಹಿ ಬಾಂಧವ್ಯ ಚಿತ್ರೀಕರಣವಾಗಿದೆ. ಹಾಗೇ ಹಿಂದಿ ಪದಗಳೊಂದಿಗೆ ಗುಜರಾತಿ ಗೀತ ಸಾಹಿತ್ಯವಿರುವುದರಿಂದ ದೇಶಿ ಸ್ಪರ್ಶ ಸಿಕ್ಕಿದೆ.

ಮತ್ತೊಂದು ‘ಸಪ್ನೆ ರೇ’ ಹಾಡಿನಲ್ಲಿ ಝೈರಾ ವಾಸಿಂ ಕನಸುಗಳಿಗೆ ಸಂಗೀತದ ದಾರ ಪೋಣಿಸಿ ಮುದ್ದಾಗಿ ಹಾಡನ್ನು ಹೆಣೆದಿದ್ದಾರೆ. ಝೈರಾ ವಾಸಿಂ ಮುದ್ದುತನಕ್ಕೆ ಮೇಘನಾ ಮಿಶ್ರ ಹಾಡಿರುವ ‘ಸಪ್ನೆ ರೇ’ ಹಾಡು ಭಾವ ತುಂಬಿ ಬಂದಿದೆ. ಹಾಡಿನ ಸಂಪೂರ್ಣ ಚಿತ್ರೀಕರಣ ರೈಲಿನಲ್ಲಿ ನಡೆದಿದೆ. ಗೆಳೆಯರೊಂದಿಗೆ ಪ್ರವಾಸ ಹೋಗುವ ಸಂದರ್ಭದಲ್ಲಿ ತನ್ನ ಕನಸುಗಳನ್ನು ಹಾಡಿನ ಮೂಲಕ ಹೇಳಿಕೊಳ್ಳುತ್ತಾರೆ ಝೈರಾ. ಮುರಿದು ಚೂರಾದ ಕನಸುಗಳನ್ನು ಒಂದು ಮಾಡುತ್ತೇನೆ ಎಂಬ ಆಶಾಭಾವವನ್ನು ಈ ಹಾಡಿನಲ್ಲಿ ಬರೆದವರು ಕೌಸರ್ ಮುನಿರ್. ಈ ಹಾಡನ್ನು ಸಂಯೋಜನೆ ಮಾಡಿದವರು ಅಮೀತ್ ತ್ರಿವೇದಿ. ಗಿಟಾರ್‌ನಲ್ಲಿ ನುಡಿಸುತ್ತಾ ತನ್ನ ಒಂದೊಂದೇ ಕನಸುಗಳನ್ನು ಬಿಚ್ಚುತ್ತಾ ಹೋಗುತ್ತಾಳೆ ಝೈರಾ. ಈಕೆಯ ಹಾಡು ಕೇಳುತ್ತಾ ಗೆಳೆಯರೆಲ್ಲ ಖುಷಿ ಪಡುತ್ತಾರೆ.

‘ಸೀಕ್ರೆಟ್‌ ಸೂಪರ್ ಸ್ಟಾರ್’ ಸಿನಿಮಾದಲ್ಲಿ ಝೈರಾ ತಾನು ದೊಡ್ಡ ಗಾಯಕಿಯಾಗಬೇಕು ಎಂಬ ಕನಸು ಕಟ್ಟಿಕೊಂಡಿರುತ್ತಾಳೆ. ಆದರೆ ಆಕೆ ತಂದೆಗೆ ಇದು ಇಷ್ಟವಿರುವುದಿಲ್ಲ. ಹಾಗಾಗಿ ಬುರ್ಖಾ ಧರಿಸಿ ಹಾಡಿ, ವಿಡಿಯೊವನ್ನು ಯುಟ್ಯೂಬ್‌ನಲ್ಲಿ ಹಾಕುತ್ತಿರುತ್ತಾಳೆ.

ಇದೇ ಕಥೆ ಎಳೆಯಲ್ಲಿ ‘ಮೇ ಕೌನ್‌ ಹು’ (ನಾನು ಯಾರು) ಎಂಬ ಹಾಡನ್ನು ಆಗಸ್ಟ್‌ನಲ್ಲಿ ಯುಟ್ಯೂಬ್‌ನಲ್ಲಿ ಬಿಡುಗಡೆ ಮಾಡಿದ್ದರು. ಬುರ್ಖಾವಿಲ್ಲದೆ ಎಲ್ಲೂ ಹಾಡದ ಝೈರಾ ‘ಸಪ್ನೆ ರೇ’ ಹಾಡಿನಲ್ಲಿ ಬಹಿರಂಗವಾಗಿ ಹಾಡಿದ್ದಾಳೆ. ಈ ಹಾಡು ಕಥೆಯ ಮತ್ತೊಂದು ಎಳೆಯನ್ನು ಬಿಚ್ಚಿಟ್ಟಿದೆ. ಅದ್ವೈತ್ ಚಂದನ್ ನಿರ್ದೇಶನ ಮಾಡಿರುವ ಈ ಸಿನಿಮಾ ಅಕ್ಟೋಬರ್ 19ರಂದು ಬಿಡುಗಡೆಯಾಗಲಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry