ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ಇ– ಟಿಕೆಟ್‌: ಮಾರ್ಚ್‌ವರೆಗೆ ಸೇವಾ ಶುಲ್ಕ ಇಲ್ಲ

Last Updated 3 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಆನ್‌ಲೈನ್‌ನಲ್ಲಿ ರೈಲು ಟಿಕೆಟ್‌ ಕಾದಿರಿಸುವವರಿಗೆ ಸಿಹಿ ಸುದ್ದಿ. ಮಾರ್ಚ್‌ 2018ರ ವರೆಗೆ ಟಿಕೆಟ್‌ ಮೇಲಿನ ಸೇವಾ ಶುಲ್ಕ ಇರುವುದಿಲ್ಲ.

ಕಳೆದ ವರ್ಷದ ನವೆಂಬರ್‌ನಲ್ಲಿ ಗರಿಷ್ಠ ಮುಖಬೆಲೆಯ ನೋಟು ರದ್ದುಪಡಿಸಿದ ನಂತರ ಡಿಜಿಟಲ್‌ ವಿಧಾನ ಹಣ ಪಾವತಿ ಉತ್ತೇಜಿಸಲು ಸೇವಾಶುಲ್ಕವನ್ನು ರದ್ದುಪಡಿಸಲಾಗಿತ್ತು. ಆನಂತರ ಈ ವರ್ಷದ ಜೂನ್‌ 30 ವರೆಗೆ ತದನಂತರ ಸೆ.30 ರವರೆಗೆ ಸೇವಾಶುಲ್ಕ ರದ್ದು ವಿಸ್ತರಿಸಲಾಗಿತ್ತು. ಇದೀಗ ಈ ಸೌಲಭ್ಯವನ್ನು 2018ರ ಮಾರ್ಚ್‌ವರೆಗೆ ವಿಸ್ತರಿಸಲಾಗಿದೆ.  ಐಆರ್‌ಸಿಟಿಸಿಯಲ್ಲಿ ಟಿಕೆಟ್‌ ಬುಕ್‌ ಮಾಡಿದರೆ ₹20 ರಿಂದ ₹40 ರವರೆಗೆ ಸೇವಾ ಶುಲ್ಕ ವಿಧಿಸಲಾಗುತ್ತಿತ್ತು.

ಆನ್‌ಲೈನ್‌ನಲ್ಲಿ ಟಿಕೆಟ್‌ ಬುಕ್ ಮಾಡುವವರಿಗೆ ಸೇವಾ ಶುಲ್ಕ ವಿಧಿಸಿದರೆ ಐಆರ್‌ ಸಿಟಿಸಿಗೆ ಶೇ 33 ರಷ್ಟು ಆದಾಯ ಬರಲಿದೆ. ಕಳೆದ ವರ್ಷದ ಹಣಕಾಸು ವರ್ಷದಲ್ಲಿ ₹540 ಕೋಟಿ ವರಮಾನದಲ್ಲಿ ₹1,500 ಕೋಟಿ ಟಿಕೆಟ್‌ ಕಾದಿರಿಸುವುದರಿಂದ ಬಂದಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT