ಪಾಸ್‌ವರ್ಡ್‌ ಹಂಚಿಕೊಳ್ಳದೆ ಜಿಮೇಲ್‌ ಅಕ್ಸೆಸ್‌ ನೀಡುವುದು ಹೇಗೆ?

ಗುರುವಾರ , ಮೇ 23, 2019
29 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಪಾಸ್‌ವರ್ಡ್‌ ಹಂಚಿಕೊಳ್ಳದೆ ಜಿಮೇಲ್‌ ಅಕ್ಸೆಸ್‌ ನೀಡುವುದು ಹೇಗೆ?

Published:
Updated:

ಒಂದೇ ಜಿಮೇಲ್‌ ಅಕೌಂಟ್‌ನಲ್ಲಿ ಕಚೇರಿಯ ಕೆಲಸಗಳನ್ನು ಒಬ್ಬರಿಗಿಂತ ಹೆಚ್ಚು ಮಂದಿ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಆ ಅಕೌಂಟ್‌ನ ಪಾಸ್‌ವರ್ಡ್‌ ಹಂಚಿಕೊಳ್ಳದೆಯೇ ಉಳಿದ ಸಹೋದ್ಯೋಗಿಗಳಿಗೂ ಆ ಜಿಮೇಲ್‌ ಅಕೌಂಟ್‌ ಬಳಸಲು ಅಕ್ಸೆಸ್‌ ನೀಡುವುದು ಹೇಗೆ ಎಂಬ ಬಗ್ಗೆ ಈ ವಾರ ತಿಳಿದುಕೊಳ್ಳೋಣ.

ನಿಮ್ಮ ಕಚೇರಿಯ ಸಾಮಾನ್ಯ ಜಿಮೇಲ್‌ ಅಕೌಂಟ್‌ಗೆ ಲಾಗಿನ್‌ ಆದ ಬಳಿಕ ಸೆಟ್ಟಿಂಗ್ಸ್‌ ಮೇಲೆ ಕ್ಲಿಕ್ ಮಾಡಿ. ಇಲ್ಲಿ ಕಾಣುವ ಆಯ್ಕೆಗಳಲ್ಲಿ Accounts and Import ಆಯ್ಕೆಯ ಮೇಲೆ ಕ್ಲಿಕ್ಕಿಸಿ. ಈ ಆಯ್ಕೆಯ ಕೆಳಗೆ ಕಾಣುವ Under Grant access to your account ಎಂಬ ಆಯ್ಕೆಯ ಎದುರಿಗೆ ಕಾಣುವ click Add another account ಎಂಬಲ್ಲಿ ಕ್ಲಿಕ್‌ ಮಾಡಿ.

ಈಗ ತೆರೆದುಕೊಳ್ಳುವ ಪುಟದಲ್ಲಿ ನೀವು ಅಕ್ಸೆಸ್‌ ನೀಡಬೇಕೆಂದಿರುವವರ ಜಿಮೇಲ್‌ ವಿಳಾಸ ಎಂಟರ್‌ ಮಾಡಿ, ಬಳಿಕ Next Step ಎಂಬಲ್ಲಿ ಕ್ಲಿಕ್ಕಿಸಿ. ಈಗ, ‘ನೀವು ಎಂಟರ್‌ ಮಾಡಿದ ಜಿಮೇಲ್‌ ವಿಳಾಸದಿಂದ ನಿಮ್ಮ ಅಕೌಂಟ್‌ ಅಕ್ಸೆಸ್‌ ಮಾಡಲು ಒಪ್ಪಿಗೆ ಇದೆಯೇ? ಇದಕ್ಕಾಗಿ ನೀವು ಎಂಟರ್‌ ಮಾಡಿದ ಜಿಮೇಲ್‌ ವಿಳಾಸಕ್ಕೆ ಕನ್ಫರ್ಮೇಷನ್‌ ಮೇಲ್‌ ಕಳಿಸಬೇಕಾಗುತ್ತದೆ’ ಎಂಬ ಸಂದೇಶ ಕಾಣಿಸಿಕೊಳ್ಳುತ್ತದೆ. ಈಗ send email to grant access ಎಂಬಲ್ಲಿ ಕ್ಲಿಕ್‌ ಮಾಡಿ.

ನಿಮ್ಮ ಕನ್ಫರ್ಮೇಷನ್‌ ಮೇಲ್‌ ನೀವು ಎಂಟರ್‌ ಮಾಡಿದ ಜಿಮೇಲ್‌ಗೆ ಹೋಗಿರುತ್ತದೆ. ಅವರಿಗೆ ತಲುಪಿದ ಸಂದೇಶದ ಲಿಂಕ್‌ ಅನ್ನು ಅವರು 7 ದಿನಗಳ ಒಳಗೆ ಕ್ಲಿಕ್‌ ಮಾಡಿದರೆ ನಿಮ್ಮ ಜಿಮೇಲ್‌ ಅಕೌಂಟ್‌ ಅನ್ನು ಅವರು ಅಕ್ಸೆಸ್‌ ಮಾಡಬಹುದು. ನಿಮ್ಮ ಅಕೌಂಟ್‌ ಅಕ್ಸೆಸ್‌ ಮಾಡುತ್ತಿರುವವರು ತೆರೆದ ಸಂದೇಶಗಳು ಯಾವುವು ಎಂಬುದನ್ನು ತಿಳಿಯಲು click Add another account ಕೆಳಗಿನ ಆಯ್ಕೆಗಳಲ್ಲಿ Mark conversation as read when opened by others ಎಂಬ ಆಯ್ಕೆ ಕ್ಲಿಕ್ಕಿಸಿ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry