ಎಸ್‌ಬಿಐ ಅಧ್ಯಕ್ಷರಾಗಿ ರಜನೀಶ್‌ ಕುಮಾರ್‌ ನೇಮಕ

ಗುರುವಾರ , ಜೂನ್ 20, 2019
27 °C

ಎಸ್‌ಬಿಐ ಅಧ್ಯಕ್ಷರಾಗಿ ರಜನೀಶ್‌ ಕುಮಾರ್‌ ನೇಮಕ

Published:
Updated:
ಎಸ್‌ಬಿಐ ಅಧ್ಯಕ್ಷರಾಗಿ ರಜನೀಶ್‌ ಕುಮಾರ್‌ ನೇಮಕ

ನವದೆಹಲಿ: ಭಾರತೀಯ ಸ್ಟೇಟ್‌ ಬ್ಯಾಂಕ್‌ನ ನೂತನ ಅಧ್ಯಕ್ಷರಾಗಿ ರಜನೀಶ್‌ ಕುಮಾರ್ ನೇಮಕವಾಗಿದ್ದಾರೆ.

ಅರುಂಧತಿ ಭಟ್ಟಾಚಾರ್ಯ ಅವರ ಅಧಿಕಾರಾವಧಿ ಶುಕ್ರವಾರ ಕೊನೆಗೊಳ್ಳಲಿದೆ. ಹಾಗಾಗಿ ರಜನೀಶ್‌ ಅವರನ್ನು ಮೂರು ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ.

ಕೇಂದ್ರ ಸಚಿವ ಸಂಪುಟದ ನೇಮಕಾತಿ ಸಮಿತಿಯು ರಜನೀಶ್‌ ಅವರ ನೇಮಕ ಮಾಡಲು ಒಪ್ಪಿಗೆ ನೀಡಿದೆ.

ಸದ್ಯ ಎಸ್‌ಬಿಐನಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿರುವ ರಜನೀಶ್‌ ಅಕ್ಟೋಬರ್‌ 7 ರಂದು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಸರ್ಕಾರ ತಿಳಿಸಿದೆ.

ಭಟ್ಟಾಚಾರ್ಯ ಅವರು ಎಸ್‌ಬಿಐನ ಮೊದಲ ಮಹಿಳಾ ಅಧ್ಯಕ್ಷರಾಗಿ 2013ರಲ್ಲಿ ನೇಮಕ ಆಗಿದ್ದರು. ಮೂರು ವರ್ಷಗಳ ಅವಧಿ ಮುಗಿದ ಬಳಿಕ 2016ರ ಅಕ್ಟೋಬರ್‌ನಲ್ಲಿ ಅವರ ಅಧಿಕಾರಾವಧಿಯನ್ನು ಒಂದು ವರ್ಷದವರೆಗೆ ವಿಸ್ತರಿಸಲಾಗಿತ್ತು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry