ಪೂರ್ಣಗೊಳ್ಳದ ಟ್ಯಾಂಕ್‌ ಪಂಚಾಯಿತಿಗೆ ಹಸ್ತಾಂತರ

ಭಾನುವಾರ, ಜೂನ್ 16, 2019
28 °C

ಪೂರ್ಣಗೊಳ್ಳದ ಟ್ಯಾಂಕ್‌ ಪಂಚಾಯಿತಿಗೆ ಹಸ್ತಾಂತರ

Published:
Updated:

ಜನವಾಡ: ಬೀದರ್ ತಾಲ್ಲೂಕಿನ ಚಿಟ್ಟಾ ಗ್ರಾಮ ಪಂಚಾಯಿತಿ ಅಧ್ಯಕ್ಷೆ, ಅಭಿವೃದ್ಧಿ ಅಧಿಕಾರಿ ಹಾಗೂ ಕಿರಿಯ ಎಂಜಿನಿಯರ್ ಇನ್ನೂ ಪೂರ್ಣಗೊಳ್ಳದ ಕುಡಿಯುವ ನೀರಿನ ಟ್ಯಾಂಕ್‌ ಅನ್ನು ಪಂಚಾಯಿತಿಗೆ ಹಸ್ತಾಂತರ ಮಾಡಿಕೊಂಡಿದ್ದಾರೆ.

ಚಿಟ್ಟಾ ಗ್ರಾಮದ ಪರಿಶಿಷ್ಟ ಓಣಿಯಲ್ಲಿ ಕುಡಿಯುವ ನೀರಿನ ಟ್ಯಾಂಕ್‌ ನಿರ್ಮಾಣ ಹಾಗೂ ಪೈಪ್‌ ಅಳವಡಿಕೆಗೆ ₹ 50 ಲಕ್ಷ ಮಂಜೂರಾಗಿದೆ. ನೀರಿನ ಟ್ಯಾಂಕ್‌ ಕಾಮಗಾರಿ ಕ್ರಿಯಾ ಯೋಜನೆ ಪ್ರಕಾರ ಮಾಡಿಲ್ಲ. 500 ಮನೆಗಳಿಗೆ ಪೈಪ್‌ಲೈನ್‌ ಸಂಪರ್ಕ ಕಲ್ಪಿಸುವ ಬದಲು ಕೇವಲ 25 ಜನರಿಗೆ ಪ್ಲಾಸ್ಟಿಕ್ ನಳಗಳನ್ನು ಕೊಡಲಾಗಿದೆ. ಕಾಮಗಾರಿಯ ಸಂಪೂರ್ಣ ಹಣ ಎತ್ತಿ ಹಾಕಲಾಗಿದೆ.

ಗ್ರಾ.ಪಂ ಅಧ್ಯಕ್ಷೆ, ಪಿಡಿಒ ವಿರುದ್ಧ ಕ್ರಮ ಕೈಗೊಳ್ಳಬೇಕು. ಬಾಕಿ ಇರುವ ಕಾಮಗಾರಿ ಪೂರ್ಣಗೊಳಿಸಬೇಕು.

ರೇಣುಕಾ ದಿಗಂಬರ, ಗ್ರಾ.ಪಂ. ಸದಸ್ಯೆ, ಚಿಟ್ಟಾ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry