ಅಣ್ಣ–ತಮ್ಮನಾಗಿ ವರುಣ್‌, ಆದಿತ್ಯ

ಭಾನುವಾರ, ಮೇ 26, 2019
28 °C

ಅಣ್ಣ–ತಮ್ಮನಾಗಿ ವರುಣ್‌, ಆದಿತ್ಯ

Published:
Updated:
ಅಣ್ಣ–ತಮ್ಮನಾಗಿ ವರುಣ್‌, ಆದಿತ್ಯ

ಕರಣ್ ಜೋಹರ್ ನಿರ್ದೇಶಿಸಲಿರುವ ಹೊಸ ಸಿನಿಮಾ ‘ಶಿದ್ದತ್‌’ನಲ್ಲಿ ನಟರಾದ ವರುಣ್ ಧವನ್ ಮತ್ತು ಆದಿತ್ಯ ರಾಯ್ ಕಪೂರ್ ಸಹೋದರರ ಪಾತ್ರ ನಿರ್ವಹಿಸಲಿದ್ದಾರಂತೆ.

ಸದ್ಯಕ್ಕೆ ಸಿನಿಮಾದ ಬಗ್ಗೆ ಕರಣ್ ಜೋಹರ್ ಎಲ್ಲೂ ಹೇಳಿಕೊಂಡಿಲ್ಲ. ಆದರೆ ಬಾಲಿವುಡ್‌ನಲ್ಲಿ ಈಗಾಗಲೇ ಸಿನಿಮಾದ ಬಗ್ಗೆ ಅಂತೆ–ಕಂತೆ ಸುದ್ದಿಗಳು ಗಾಸಿಪ್ ರೂಪದಲ್ಲಿ ಹರಿದಾಡುತ್ತಿವೆ.

‘ಶಿದ್ದತ್‌’ನಲ್ಲಿ ಸಂಜಯ್ ದತ್ ಮತ್ತು ಶ್ರೀದೇವಿ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದು, ವರುಣ್–ಆದಿತ್ಯ ಅವರ ಪೋಷಕರ ಪಾತ್ರದಲ್ಲಿ ನಟಿಸುತ್ತಾರೆ ಎನ್ನಲಾಗಿದೆ.

ಇಪ್ಪತ್ತಾಲ್ಕು ವರ್ಷಗಳ ಹಿಂದೆ ‘ಗುಮ್ರಾಹ್’ ಸಿನಿಮಾದಲ್ಲಿ ಸಂಜಯ್ ಮತ್ತು ಶ್ರೀದೇವಿ ಜತೆಯಾಗಿ ನಟಿಸಿದ್ದರು. ‘ಶುದ್ದತ್’ ಭಾವನಾತ್ಮಕ ಕತೆ ಹೊಂದಿರುವ ಸಿನಿಮಾ ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry