ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿವಂತ ಪಟ್ಟಿ: ಅಂಬಾನಿಗೆ ಮೊದಲ ಸ್ಥಾನ

Last Updated 5 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವದಹೆಲಿ: ಫೋಬ್ಸ್‌ ನಿಯತ ಕಾಲಿಕ ಬಿಡುಗಡೆ ಮಾಡಿರುವ ಭಾರತದ 100 ಸಿರಿವಂತರ ಪಟ್ಟಿಯಲ್ಲಿ ರಿಲಯನ್ಸ್ ಸಮೂಹದ ಮುಕೇಶ್‌ ಅಂಬಾನಿ 10ನೇ ಬಾರಿಯೂ ಮೊದಲ ಸ್ಥಾನ ಕಾಯ್ದುಕೊಂಡಿದ್ದಾರೆ.

ಅಂಬಾನಿ ಅವರು ₹2.43 ಲಕ್ಷ ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ.

ವಿಪ್ರೊ ಮುಖ್ಯಸ್ಥ ಅಜೀಂ ಪ್ರೇಮ್‌ಜಿ ಅವರು ಐದನೇ ಸ್ಥಾನದಿಂದ 2ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಅವರ ಆಸ್ತಿ ಮೌಲ್ಯ ₹1.21 ಲಕ್ಷ ಕೋಟಿಗಳಷ್ಟಿದೆ.

ಸನ್‌ ಫಾರ್ಮಾದ ಮುಖ್ಯಸ್ಥ ದಿಲೀಪ್‌ ಸಾಂಘ್ವಿ ಅವರು ಎರಡನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಇಳಿದಿದ್ದಾರೆ.

19ನೇ ಸ್ಥಾನಕ್ಕೇರಿದ ಬಾಲಕೃಷ್ಣ: ಪತಂಜಲಿ ಆಯುರ್ವೇದ ಸಂಸ್ಥೆಯ  ಸಹ ಸ್ಥಾಪಕ ಆಚಾರ್ಯ ಬಾಲಕೃಷ್ಣ ಅವರು 49ನೇ ಸ್ಥಾನದಿಂದ 19ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಅವರ ಆಸ್ತಿ ಮೌಲ್ಯ ₹43 ಸಾವಿರ ಕೋಟಿ.

ಸಿರಿವಂತ ಮಹಿಳೆಯರು: ಒ.ಪಿ.ಜಿಂದಾಲ್‌ ಸಮೂಹದ ಅಧ್ಯಕ್ಷೆ ಸಾವಿತ್ರಿ ಜಿಂದಾಲ್‌ (61), ಬಯೋಕಾನ್‌ ಮುಖ್ಯಸ್ಥೆ ಕಿರಣ್ ಮಜುಂದಾರ್‌ ಷಾ  (72) ಮತ್ತು ಫಾರ್ಮಾ ಕಂಪೆನಿ ಯುಎಸ್‌ವಿ ಇಂಡಿಯಾದ ಲೀನಾ ತಿವಾರಿ (71)  ಅವರು ಸಿರಿವಂತರ ಪಟ್ಟಿಯಲ್ಲಿರುವ ಪ್ರಮುಖ ಮಹಿಳೆಯರು.

ಹೊಸದಾಗಿ ಸೇರಿದವರು: ವಾಡಿಯಾ ಸಮೂಹದ  ನುಸ್ಲಿ ವಾಡಿಯಾ, ವಕ್ರಾಂಗಿ ಕಂಪೆನಿಯ ದಿನೇಶ್‌ ನಂದವನ (88), ಪೇಟಿಎಂನ ವಿಜಯ ಶೇಖರ ಶರ್ಮಾ (99), ಯೆಸ್‌ ಬ್ಯಾಂಕ್‌ನ ರಾಣಾ ಕಪೂರ್‌ (100) ಹೊಸದಾಗಿ ಪಟ್ಟಿಗೆ ಸೇರಿದ ಪ್ರಮುಖರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT