ಮಳೆಯಿಂದ 30 ಮನೆ ಕುಸಿತ

ಶುಕ್ರವಾರ, ಮೇ 24, 2019
28 °C

ಮಳೆಯಿಂದ 30 ಮನೆ ಕುಸಿತ

Published:
Updated:
ಮಳೆಯಿಂದ 30 ಮನೆ ಕುಸಿತ

ಬೆಳವಣಿಕಿ (ರೋಣ): ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಸುರಿದ ಮಳೆಗೆ 30 ಮನೆಗಳು ಕುಸಿದಿವೆ. ಯಾವಗಲ್, ಮಲ್ಲಪೂರ, ಕೌಜಗೇರಿ, ಸಂದಿಗವಾಡ, ಬೆಳವಣಿಕಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶೇಂಗಾ, ಉಳ್ಳಾಗಡ್ಡಿ, ಜೋಳ, ಹತ್ತಿ ಬೆಳೆಗಳು ಹಾನಿಯಾಗಿವೆ. ಜಮೀನಿಗೆ ನೀರು ನುಗ್ಗಿದ್ದರಿಂದ ಬದುಗಳು ಒಡೆದಿವೆ. ಚೆಕ್‌ಡ್ಯಾಂ, ಕೃಷಿಹೊಂಡ ತುಂಬಿ ಹರಿದಿವೆ.

ಹಿಂದೆ ಬರಗಾಲದಿಂದ ರೈತರು ತೀವ್ರ ತೊಂದರೆ ಅನುಭವಿಸಿದ್ದರು. ಸದ್ಯ ಸತತ ಮಳೆಯಿಂದಾಗಿ ಕಂಗಾಲಾಗಿದ್ದಾರೆ. ಹಿಂಗಾರು ಹಂಗಾಮಿನಲ್ಲಿ ಬಿತ್ತನೆಗೆ ಅಡ್ಡಿಯಾಗಿದೆ ಎಂದು ರೈತ ಬಸವರಾಜ ವಡ್ಡಟ್ಟಿ ಅಳಲುತೋಡಿಕೊಂಡರು.

‘ಭರ್ಜರಿ ಮಳೆಯಾಗಿದ್ದರಿಂದ ಮನೆಗಳು ಕುಸಿದು ಬಿದ್ದಿವೆ. ರಸ್ತೆಗಳು ಸಂಪೂರ್ಣವಾಗಿ ಹಾಳಾಗಿವೆ. ಹಾನಿಗೊಳಗಾಗ ಮನೆಗಳ ಕುಟುಂಬದವರಿಗೆ ಸರ್ಕಾರ ಶೀಘ್ರವೇ ಪರಿಹಾರ ನೀಡಬೇಕು’ ಎಂದು ಗ್ರಾಮಸ್ಥ ಶರಣಪ್ಪ ಹದ್ಲಿ, ನಿಂಗಬಸಪ್ಪ ಮೆಣಸಿನಕಾಯಿ, ಬಸವಂತಪ್ಪ ಸುಣಗದ, ಹನಮಂತಪ್ಪ ಹೂಗಾರ, ಹುಚ್ಚಪ್ಪ ವಗ್ಗರ ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry