ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಪೋಸಿಷನ್‌ ಸ್ಕೀಮ್ ಆಯ್ಕೆ ಮಿತಿ ₹1 ಕೋಟಿಗೆ ಏರಿಕೆ

Last Updated 6 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಕಂಪೋಸಿಷನ್‌ ಸ್ಕೀಮ್ (ರಾಜಿ ತೆರಿಗೆ ಪದ್ಧತಿ) ಆಯ್ಕೆ ಮಾಡಿಕೊಳ್ಳಲು ಸಣ್ಣ ಉದ್ಯಮಗಳಿಗೆ ವಿಧಿಸಿದ್ದ ವಾರ್ಷಿಕ ವಹಿವಾಟು ಮಿತಿಯನ್ನು ₹75 ಲಕ್ಷದಿಂದ ₹1 ಕೋಟಿಗೆ ಏರಿಕೆ ಮಾಡಲಾಗಿದೆ.

ಈ ಮೊದಲು ಒಂದು ವರ್ಷಕ್ಕೆ ₹20 ಲಕ್ಷದಿಂದ ₹75 ಲಕ್ಷದವರೆಗೆ ವಹಿವಾಟು ನಡೆಸುವ ಎಸ್‌ಎಂಇಗಳಿಗೆ ಮಾತ್ರವೇ ಕಂಪೋಸಿಷನ್‌ ಸ್ಕೀಮ್‌ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು.

ಜಿಎಸ್‌ಟಿ ಮಂಡಳಿಯ 22ನೇ ಸಭೆಯಲ್ಲಿ ವಹಿವಾಟು ಮಿತಿ ಹೆಚ್ಚಿಸುವ ನಿರ್ಧಾರಕ್ಕೆ ಬರಲಾಗಿದೆ ಎಂದು ಆಂಧ್ರಪ್ರದೇಶದ ಹಣಕಾಸು ಸಚಿವ ವೈ.ರಾಮಕೃಷ್ಣುಡು ಅವರು ತಿಳಿಸಿದ್ದಾರೆ.

ಜಿಎಸ್‌ಟಿಯಲ್ಲಿ ವ್ಯಾಪಾರ - ವಹಿವಾಟಿನಲ್ಲಿನ ಖರ್ಚು ವೆಚ್ಚಗಳನ್ನು ಗಣನೀಯವಾಗಿ ಕಡಿಮೆ ಮಾಡುವ ಮೂಲಕ ಸಣ್ಣ ವರ್ತಕರ ಹಿತರಕ್ಷಣೆ ಮಾಡುವ ಉದ್ದೇಶದಿಂದ ಕಂಪೋಸಿಷನ್‌ ಸ್ಕೀಮ್‌ ಪರಿಚಯಿಸಲಾಗಿದೆ.

ಎಷ್ಟು ಪ್ರಮಾಣದ ತೆರಿಗೆ?

 ವರ್ತಕರಿಗೆ ಶೇ 1

 ಸರಕು ತಯಾರಿಸುವವರಿಗೆ ಶೇ 2

 ಆಹಾರ ಅಥವಾ ಪಾನೀಯ (ಆಲ್ಕೋಹಾಲ್‌ ಹೊರತುಪಡಿಸಿ) ಪೂರೈಕೆ ಮಾಡುವವರಿಗೆ ಶೇ 5

ಯಾರಿಗೆ ಈ ಆಯ್ಕೆ ಇಲ್ಲ: ಅಂತರರಾಜ್ಯ ಪೂರೈಕೆ (ಮಾರಾಟ) ಮಾಡುವವರು ಈ ಕಾಯ್ದೆಯಡಿಯಲ್ಲಿ ತೆರಿಗೆ ವಿಧಿಸಲಾಗದ ಸರಕುಗಳ (ಉದಾಹರಣೆಗೆ– ಮದ್ಯ,ಪೆಟ್ರೋಲಿಯಂ ಉತ್ಪನ್ನಗಳು) ಪೂರೈಕೆಯಲ್ಲಿ(ಖರೀದಿ- ಮಾರಾಟ) ತೊಡಗಿದವರು ಆಹಾರ ಮತ್ತು ಮದ್ಯ ಹೊರತುಪಡಿಸಿ ಇತರ ಸೇವೆಗಳ ಪೂರೈಕೆಯಲ್ಲಿ ತೊಡಗಿದವರು

ಸಾಂದರ್ಭಿಕ ಮತ್ತು ಅನಿವಾಸಿ ವರ್ತಕರು ಗೊತ್ತುಪಡಿಸಿದ ದಿನ (ಜುಲೈ 1,2017) ಅಂತರರಾಜ್ಯ ಕ್ರಮದಲ್ಲಿ ಖರೀದಿಸಿದ ಅಥವಾ ದಾಸ್ತಾನು ವರ್ಗಾವಣೆ ಮಾಡಿಕೊಂಡ ಸರಕುಗಳ ದಾಸ್ತಾನು ಹೊಂದಿದವರು

ಇ-ಕಾಮರ್ಸ್‌ ಆಪರೇಟರಗಳ ಮೂಲಕ ತಮ್ಮ ಸರಕುಗಳನ್ನು ಪೂರೈಕೆ ಮಾಡುವ ವರ್ತಕರು ಜಿಎಸ್‌ಟಿ ಮಂಡಳಿಯ ಶಿಫಾರಸಿನಂತೆ ಅಧಿಸೂಚಿಸುವ ಸರಕುಗಳ ತಯಾರಿಕೆಯಲ್ಲಿ ತೊಡಗಿದವರು ಈ ರಾಜಿಪದ್ಧತಿಯನ್ನು ಆಯ್ದುಕೊಳ್ಳಲು ಬರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT