ವಿನೂ ಮಂಕಡ್‌ ಟ್ರೋಫಿ ಟೂರ್ನಿಗೆ ರಾಜ್ಯ ತಂಡ ಪ್ರಕಟ

ಸೋಮವಾರ, ಜೂನ್ 17, 2019
25 °C

ವಿನೂ ಮಂಕಡ್‌ ಟ್ರೋಫಿ ಟೂರ್ನಿಗೆ ರಾಜ್ಯ ತಂಡ ಪ್ರಕಟ

Published:
Updated:

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಶನಿವಾರದಿಂದ ನಡೆಯುವ ವಿನೂ ಮಂಕಡ್‌ ಟ್ರೋಫಿ 19 ವರ್ಷದೊಳಗಿನವರ ದಕ್ಷಿಣ ವಲಯ ಏಕದಿನ ಕ್ರಿಕೆಟ್‌ ಟೂರ್ನಿಗೆ ರಾಜ್ಯ ತಂಡವನ್ನು ಪ್ರಕಟಿಸಿದೆ.

ಟೂರ್ನಿಯ ಪಂದ್ಯಗಳು ಅಕ್ಟೋ ಬರ್‌ 14ರವರೆಗೆ ಆಲೂರಿನ ಕ್ರೀಡಾಂಗಣಗಳಲ್ಲಿ ಜರುಗಲಿವೆ. ಜವಾಹರ ಸ್ಪೋರ್ಟ್ಸ್‌ ಕ್ಲಬ್‌ನ ನಿಕಿನ್‌ ಜೋಶ್‌ ಅವರು ಕರ್ನಾಟಕ ತಂಡದ ಸಾರಥ್ಯ ವಹಿಸಲಿದ್ದಾರೆ.

ತಂಡ ಇಂತಿದೆ: ನಿಕಿನ್‌ ಜೋಸ್ (ನಾಯಕ), ದೇವದತ್ತ ಪಡಿಕಲ್‌ (ಉಪ ನಾಯಕ), ಬಿ.ಎ.ಮೋಹಿತ್‌, ಲವನಿತ್‌ ಸಿಸೋಡಿಯಾ, ಶುಭಾಂಗ್‌ ಹೆಗ್ಡೆ, ಗೌತಮ್‌ ಸಾಗರ್‌, ಮನೋಜ್‌ ಭಂಡಾಗೆ, ಸುಜಯ್‌ ಸತೇರಿ (ವಿಕೆಟ್‌ ಕೀಪರ್‌), ಎಂ.ಹಿಮಾದ್ರಿ, ಬಿ.ಎಂ.ಶ್ರೇಯಸ್‌, ರುಚಿರ್‌ ಜೋಶಿ, ಅಮನ್‌ ಖಾನ್‌, ವಿದ್ವತ್‌ ಕಾವೇರಪ್ಪ, ರೋಹಿತ್‌ ಸಾಯಿ ರಾಮ್‌ ಮತ್ತು ಬಿ.ಧೀಮಂತ್‌.

ಕೋಚ್‌: ಯರೇಗೌಡ. ಸಹಾಯಕ ಕೋಚ್‌: ವಿಜಯ್‌ ಮದ್ಯಾಲ್ಕರ್‌. ಮ್ಯಾನೇಜರ್‌: ಅನುತೋಷ್‌ ಪಾಲ್‌. ಫಿಸಿಯೊ: ಟಿ.ಮಂಜುನಾಥ್‌. ವಿಡಿಯೊ ವಿಶ್ಲೇಷಕ: ಪಿ.ರಾಜೀವ್‌. ಟ್ರೈನರ್‌: ಎ.ಕಿರಣ್.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry