ಬೇಗಂ ಅಖ್ತರ್‌ ಜನ್ಮದಿನಕ್ಕೆ ಗೂಗಲ್‌ ಡೂಡಲ್‌ ಗೌರವ

ಮಂಗಳವಾರ, ಜೂನ್ 25, 2019
29 °C

ಬೇಗಂ ಅಖ್ತರ್‌ ಜನ್ಮದಿನಕ್ಕೆ ಗೂಗಲ್‌ ಡೂಡಲ್‌ ಗೌರವ

Published:
Updated:
ಬೇಗಂ ಅಖ್ತರ್‌ ಜನ್ಮದಿನಕ್ಕೆ ಗೂಗಲ್‌ ಡೂಡಲ್‌ ಗೌರವ

ಬೆಂಗಳೂರು: ಗಝಲ್‌ ದಂತಕಥೆ ಬೇಗಂ ಅಖ್ತರ್‌ ಅವರ 103ನೇ ಜನ್ಮದಿನಕ್ಕೆ ಗೂಗಲ್‌ ಡೂಡಲ್‌ ಗೌರವ ನೀಡಿದೆ.

ಬೇಗಂ ಅಖ್ತರ್‌ ಅವರು ಉತ್ತರ ಪ್ರದೇಶದ ಭದರ್ಸಾದಲ್ಲಿ 1914ರ ಅಕ್ಟೋಬರ್‌ 7ರಂದು ಜನಿಸಿದರು. ಗಝಲ್‌, ಟುಮ್ರಿ, ದಾದರಾ ಗಾಯನದಲ್ಲಿ ಅವರು ಹೆಸರು ಮಾಡಿದ್ದರು.

ಹಲವು ಹಿಂದಿ ಸಿನಿಮಾಗಳ ಗೀತೆಗಳಿಗೆ ದನಿಯಾಗಿದ್ದ ಅವರು ಕೆಲ ಚಿತ್ರಗಳಲ್ಲಿ ನಟಿಸಿದ್ದರು. ಪದ್ಮಶ್ರೀ, ಪದ್ಮ ಭೂಷಣ, ಕೇಂದ್ರ ಸಂಗೀತ– ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಅವರು ಭಾಜನರಾಗಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry