ಬಣ್ಣದ ಬುಗುರಿ

ಮಂಗಳವಾರ, ಜೂನ್ 25, 2019
27 °C

ಬಣ್ಣದ ಬುಗುರಿ

Published:
Updated:
ಬಣ್ಣದ ಬುಗುರಿ

1

ನನ್ನದು ಬಣ್ಣದ ಬುಗುರಿ

ಜಾಳಿಗೆ ಸುತ್ತಿ ಎಸೆದರೆ

ತಿರುಗುವುದು ಗಿರ ಗಿರ

2

ಕ್ಲಾಸಿನಲಿ ದಿನ ಪೂರ

ಪಾಠ ಕೇಳಿ ಬೇಜಾರು

ಸಂಜೆಯಲಿ ಅಂಗಳದಲಿ

ಆಡಿಸುವೆನು ಬುಗುರಿ

3

ಮನ ಮೋಹಕವಿದು ಬುಗುರಿ

ಅದಕೇ ಗೆಳೆಯರು ಕರುಬುವರು

ಪಿಚ್ಚೆನಿಸಿ ಅವರಿಗೂ ಕೊಡುವೆನು ಆಡಿಸಲು ಬುಗುರಿ

4

ಗಿರಗಿಟ್ಲೆಗಿಂತ ಚೆಂದ ತಿರುಗುವುದು ಬುಗುರಿ

ತಿರು ತಿರುಗಿ ತೂತು ಬೀಳಿಸುವುದು ನೆಲದಲಿ ಅದರ ಪರಿ

5

ಅಂಗೈಯಲ್ಲೂ ಆಡುವುದು ಮುದ್ದಿನ ಬುಗುರಿ

ಅದರ ಕಚಗುಳಿಗೆ ಮನ ಹಿಗ್ಗುವುದು ಹಿರಿ ಹಿರಿ

6

ಬುಗುರಿಗಳ ಲೀಡರ್ ನನ್ನಯ ಬುಗುರಿ

ಹುಸಿ ಹೋಗದು ನುರಿ ಇಟ್ಟರೆ

ಗೆಳೆಯರ ಬುಗುರಿಗೆ ಗಿಣ್ಣಿ ಬೀಳುವುದು ಖರೆ

ಅದಕೆ ಅವರು ಮರಗುವರು ಮರ ಮರ

7

ಬಣ್ಣದ ಬುಗುರಿಯೇ ನಿಜ ಗೆಳೆಯ

ಅದುವೇ ಸರ್ವಸ್ವ, ಅದುವೇ ನನಗೆ ಪ್ರಿಯ

–ಟಿ.ಎಸ್.ಗೊರವರ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry