ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗತವೈಭವ ಸಾರುವ ಕನಸಾವಿ ದೇವಾಲಯ

Last Updated 8 ಅಕ್ಟೋಬರ್ 2017, 9:32 IST
ಅಕ್ಷರ ಗಾತ್ರ

ಮುದಗಲ್: ಲಿಂಗಸುಗೂರು ತಾಲ್ಲೂಕಿನ ಮುದಗಲ್ ಹೋಬಳಿ ವ್ಯಾಪ್ತಿಯ ಕನಸಾವಿ ಗ್ರಾಮದಲ್ಲಿ ರುವ ಕಲ್ಯಾಣ ಚಾಲುಕ್ಯರ ದೇವಾಲಯಗಳು ಗತ ವೈಭವ ಸಾರುತ್ತಿವೆ.

ಕಾಲಕಾಲೇಶ್ವರ ದೇವಾಲಯ: ಗ್ರಾಮದ ಅಗಸಿಯಿಂದ ದಕ್ಷಿಣಕ್ಕೆ ಕೋಟೆ ಗೋಡೆಗೆ ಹೊಂದಿಕೊಂಡು ಇರುವ ಕಾಲಕಾಲೇಶ್ವರ ದೇಗುಲ ಕಲ್ಯಾಣ ಚಾಲುಕ್ಯರ ವಾಸ್ತುಶೈಲಿ ಹೊಂದಿದೆ. ಗರ್ಭಗೃಹ ಹಾಗೂ ಅಂತರಾಳ ಇದೆ. ಗರ್ಭಗೃಹದಲ್ಲಿ ಪ್ರಾಚೀನ ಕಾಲದ ಈಶ್ವರ ಲಿಂಗ ಇದರ ಮುಂದೆ ನಂದಿ ಇದೆ. ದೇವಾಲಯದ ಚಾವಣಿಗೆ ಹಾಸು ಬಂಡೆಗಲ್ಲುಗಳು ಹಾಕಿದ್ದು, ದೇವಸ್ಥಾನವನ್ನು ಕಣಶಿಲೆಯಲ್ಲಿ (ಗ್ರಾನೈಟ್) ನಿರ್ಮಾಣವಾಗಿದೆ.

ಬಸವಣ್ಣ ದೇವಸ್ಥಾನ: ಕಾಲಕಾಲೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ದಕ್ಷಿಣ ಅಭಿಮುಖವಾಗಿ ನಿರ್ಮಾಣವಾಗಿರುವ ಬಸವಣ್ಣ ದೇವಾಲಯ 12-13ನೇ ಶತಮಾನದಲ್ಲಿ ನಿರ್ಮಾಣವಾಗಿದೆ. ದೇವಾಲಯ ಅಧಿಷ್ಠಾನ ಹೊಂದಿದ್ದು, ಗರ್ಭಗೃಹದ ದೇವಕೋಷ್ಠದಲ್ಲಿ ಪ್ರಾಚೀನ ಕಾಲದ ನಂದಿ ಮೂರ್ತಿ ಇದೆ.

ರಾಮಲಿಂಗೇಶ್ವರ ದೇವಸ್ಥಾನ: ಪೂರ್ವ ಅಭಿಮುಖವಾಗಿ ನಿರ್ಮಾಣ ವಾಗಿರುವ ಈ ದೇವಾಲಯವು ಕಲ್ಯಾಣ ಚಾಲುಕ್ಯರ ವಾಸ್ತು ಶೈಲಿ ಹೊಂದಿದ್ದು, 12-13 ನೇ ಶತಮಾನದಲ್ಲಿ ನಿರ್ಮಾಣವಾಗಿದೆ. ಗ್ರಾಮದ ಪಶ್ಚಿಮ ದಿಕ್ಕಿಗೆ ಗ್ರೀವನಲ್ಲಿ ನಿರ್ಮಾಣವಾಗಿದೆ. ದೇವಾಲಯದಲ್ಲಿ ಗರ್ಭಗೃಹ, ಅಂತರಾಳ ಮತ್ತು ಸಭಾಮಂಟಪ ಇದೆ. ಗರ್ಭಗೃಹದಲ್ಲಿ ಪ್ರಾಚೀನ ಕಾಲದ ಈಶ್ವರ ಲಿಂಗ ಇದರ ಮುಂದೆ ನಂದಿ ಮೂರ್ತಿ ಇದೆ. ಪ್ರಾಚೀನ ಕಾಲದ ಶಿಖರಕ್ಕೆ ಈಚೆಗೆ ನವೀಕರಿಸಲಾಗಿದೆ.

ಶಾಸನಗಳು:ರಾಮಲಿಂಗೇಶ್ವರ ದೇವಾಲಯದ ಮುಂದೆ 12ನೇ ಶತಮಾನಕ್ಕೆ ಸೇರಿದ ಶಾಸನದ ಕೆಲ ಭಾಗಗಳು ದೊರೆತಿವೆ. ಈ ಶಾಸನ ಶಾಪಾಶಯದ ವಿವರ ನೀಡುತ್ತದೆ. ಶಾಸನದ ಕೊನೆಯ ಭಾಗ ಹಾಳಾಗಿದೆ. ಗ್ರಾಮದ ಕೆರೆ ದಂಡೆಯ ಮೇಲೆ ದೊರೆತಿರುವ ಶಾಸನದಲ್ಲಿ ಕಣ್ವಸಾವಿ ಗ್ರಾಮಕ್ಕೆ ಕಲ್ಯಾಣ ಚಾಲುಕ್ಯರ ತ್ರಿಭುವ ನಮಲ್ಲನ ದಂಡನಾಯಕ ಮಹೇಶ್ವರಯ್ಯ ದಾನ ನೀಡಿದ ಉಲ್ಲೇಖವಿದೆ.

ಗ್ರಾಮದಲ್ಲಿ ಐತಿಹಾಸಿಕವಾದ ಬಾವಿ ಇದೆ. ಇದು ಸುತ್ತಲು ಗ್ರಾನೈಟ್ ಕಲ್ಲಿನ ಕಟ್ಟಡದಿಂದ ನಿರ್ಮಾಣವಾಗಿದೆ. 150ಕ್ಕೂ ಹೆಚ್ಚು ಪಾವಟಗಿ ಹೊಂದಿ ಸುಂದರವಾಗಿ ನಿರ್ಮಾಣ ಗೊಂಡಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT