ಹ್ಯಾರಿ ಪಾಟರ್‌ನ ಜಾದು ಲಕೋಟೆ ₹6.41 ಲಕ್ಷಕ್ಕೆ ಹರಾಜು

ಬುಧವಾರ, ಜೂನ್ 26, 2019
22 °C

ಹ್ಯಾರಿ ಪಾಟರ್‌ನ ಜಾದು ಲಕೋಟೆ ₹6.41 ಲಕ್ಷಕ್ಕೆ ಹರಾಜು

Published:
Updated:
ಹ್ಯಾರಿ ಪಾಟರ್‌ನ ಜಾದು ಲಕೋಟೆ ₹6.41 ಲಕ್ಷಕ್ಕೆ ಹರಾಜು

ಲಂಡನ್ : ಹ್ಯಾರಿ ಪಾಟರ್ ಆ್ಯಂಡ್ ದ ಚೇಂಬರ್ ಆಫ್ ಸೀಕ್ರೆಟ್ಸ್ ಚಲನಚಿತ್ರದಲ್ಲಿ ‘ಹೌಲರ್’ (ಪತ್ರ ಬರೆದವನ ದನಿಯಲ್ಲಿ ಲಿಖಿತ ಸಂದೇಶ ಓದಿ ಹೇಳುವ ಜಾದು ಗುಣವುಳ್ಳ ಪತ್ರ) ಆಗಿ ಬಳಸಲಾಗಿರುವ, ಬಂಗಾರದ ಬಣ್ಣದ ಲಕೋಟೆ ₹6.41 ಲಕ್ಷಕ್ಕೆ ಹರಾಜಾಗಿದೆ. ಈ ಲಕೋಟೆಯಲ್ಲಿ ನಟ ರುಪರ್ಟ್ ಗ್ರಿಂಟ್ ಹಸ್ತಾಕ್ಷರ ‌ಇದೆ. ಜತೆಗೆ ವಾರ್ನರ್ ಸಹೋದರರು ನೀಡಿರುವ ದೇಣಿಗೆಯ ಪತ್ರವೂ ಇದೆ.

ಕೆಂಪು ಬಣ್ಣದ ಕಾಗದದ ಈ ಲಕೋಟೆ ಮೇಲೆ ಕೆನೆ ಬಣ್ಣದಲ್ಲಿ ‘ರೊನಾಲ್ಡ್ ವೆಸ್ಲೆ, ವಾಮಾಚಾರದ ಹಾಗ್‌ವರ್ಟ್ಸ್‌ ಶಾಲೆ’ ಹೆಸರಿಗೆ ಉದ್ದೇಶಿಸಲಾಗಿರುವ ತಲೆಬರಹವಿದೆ. ಇದಕ್ಕೆ ಕಡು ಕೆಂಪು ಬಣ್ಣದ ರಿಬ್ಬನ್ ಸುತ್ತಲಾಗಿದೆ. ಬಂಗಾರದ ಬಣ್ಣದ ‘ಡಬ್ಲ್ಯು’ ಅಕ್ಷರದ ಮೇಣದ ಮೊಹರು ಇದೆ.

ರೊನಾಲ್ಡ್ ವೆಸ್ಲೆ ಪಾತ್ರದಲ್ಲಿ ನಟಿಸಿರುವ ನಟ ಗ್ರಿಂಟ್ ಹಸ್ತಾಕ್ಷರ ಇರುವ, 8*10 ಇಂಚಿನ ಚಲನಚಿತ್ರದ ದೃಶ್ಯದ ಭಾವಚಿತ್ರ ಹರಾಜಿನಲ್ಲಿತ್ತು.

ನಟ ಡೇನಿಯಲ್‌ ರ‍್ಯಾಡ್‌ಕ್ಲಿಫ್ ಹಸ್ತಾಕ್ಷರ ಇರುವ ಜ್ಯಾಕೆಟ್, ಟೋಪಿ ಹಾಗೂ ಕ್ಯಾನ್‌ವಾಸ್‌ ಬ್ಯಾಗ್, ರ‍್ಯಾಡ್‌ಕ್ಲಿಫ್, ಗ್ರಿಂಟ್ ಹಾಗೂ ಎಮ್ಮಾ ವಾಟ್ಸನ್ ಹಸ್ತಾಕ್ಷರದ ಪೋಸ್ಟರ್ ಸಹ ಹರಾಜಿನಲ್ಲಿದ್ದವು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry