ಭಾನುವಾರ, ಸೆಪ್ಟೆಂಬರ್ 22, 2019
21 °C

ಧರ್ಮಪುರ: ಎಂಟು ಕೆರೆಗಳು ಭರ್ತಿ

Published:
Updated:

ಧರ್ಮಪುರ: ಇಪ್ಪತ್ತು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹೋಬಳಿಯ ಅನೇಕ ಕೆರೆಗಳು ಭರ್ತಿಯಾಗಿ ಕೋಡಿ ಬಿದ್ದಿವೆ.  ಅಂತರ್ಜಲ ಹೆಚ್ಚಿಸಲು ಪ್ರಯತ್ನಿಸಬೇಕು ಎಂದು ಶಾಸಕ ಡಿ.ಸುಧಾಕರ್ ತಿಳಿಸಿದರು. ರಂಗೇನಹಳ್ಳಿ ಕೆರೆಗೆ ಶಾಸಕ ಡಿ.ಸುಧಾಕರ್ ಶನಿವಾರ ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸಿ ಅವರು ಮಾತನಾಡಿದರು.

ಹೋಬಳಿಯ ಈಶ್ವರಗೆರೆ, ಅಬ್ಬಿನಹೊಳೆ, ಗೂಳ್ಯ, ಮುಂಗುಸುವಳ್ಳಿ, ಬಿದರಕೆರೆ, ವೇಣುಕಲ್ಲುಗುಡ್ಡ, ಅರಳೀ ಕೆರೆ, ಗೂಡನೂರನಹಳ್ಳಿ ಕೆರೆಗಳು ಭರ್ತಿಯಾಗಿ ಕೋಡಿ ಹರಿಯುತ್ತಿವೆ. ಶಾಸಕರು ಶನಿವಾರ ಎಲ್ಲಾ ಕೆರೆಗಳಿಗೂ ಗಂಗಾ ಪೂಜೆ ನೆರವೇರಿಸಿ ಬಾಗಿನ ಅರ್ಪಿಸಿದರು.

ಜಿಲ್ಲಾ ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ನಾಗೇಂದ್ರನಾಯ್ಕ್, ಶಶಿಕಲಾ ಸುರೇಶ್‌ ಬಾಬು, ಗೀತಾ ನಾಗಕುಮಾರ್‌, ಖಾದಿ ರಮೇಶ್‌, ಕಲ್ಲಹಟ್ಟಿ ತಿಪ್ಪೇಸ್ವಾಮಿ, ಎಪಿಎಂಸಿ ಅಧ್ಯಕ್ಷ ಈರಲಿಂಗೇಗೌಡ, ಗಿರಿಸ್ವಾಮಿ, ರಾಮಕೃಷ್ಣ ಹೆಗಡೆ, ಕಿರಣ್‌ಕುಮಾರ್‌, ಚಿಕ್ಕಣ್ಣ, ಎಸ್‌.ಆರ್‌.ತಿಪ್ಪೇಸ್ವಾಮಿ, ಕೃಷ್ಣಮೂರ್ತಿ ಉಪಸ್ಥಿತರಿದ್ದರು.

Post Comments (+)