ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಾಲಯಗಳು ನಾಡಿನ ಸಂಪತ್ತು

Last Updated 9 ಅಕ್ಟೋಬರ್ 2017, 9:36 IST
ಅಕ್ಷರ ಗಾತ್ರ

ಕೆಂಭಾವಿ: ‘ಪ್ರಾಚೀನ ದೇವಾಲಯ ಹಾಗೂ ಶಿಲ್ಪಗಳು ಇತಿಹಾಸ ರಚಿಸುವಲ್ಲಿ ಬಹುಮುಖ್ಯ ಆಧಾರಗಳಾಗಿವೆ. ಜೊತೆಗೆ ಶಾಸನ, ವೀರಗಲ್ಲು, ಮಾಸ್ತಿಗಲ್ಲು, ನಾಣ್ಯಗಳು ಇತಿಹಾಸ ರಚಿಸುವಲ್ಲಿ ಪ್ರಮುಖ ಆಧಾರಗಳಾಗಿರುವುದರಿಂದ ಅವುಗಳನ್ನು ಐತಿಹಾಸಿಕ ಸಂಪತ್ತು ಎಂದು ಕರೆಯುತ್ತೇವೆ’ ಎಂದು ಸಂಶೋಧಕ ನಿಂಗನಗೌಡ ದೇಸಾಯಿ ಹೇಳಿದರು.

ಪಟ್ಟಣದ ವಿದ್ಯಾವಾಹಿನಿ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ಇತಿಹಾಸ ಅಕಾಡೆಮಿ ಸಹಯೋಗದೊಂದಿಗೆ ಶನಿವಾರ ಹಮ್ಮಿಕೊಂಡಿದ್ದ ಐತಿಹಾಸಿಕ ಪರಂಪರೆ ಉಳಿಸಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೆಂಭಾವಿ ವಲಯದಲ್ಲಿರುವ ಮುದನೂರ, ಕೆಂಭಾವಿ, ಏವೂರ, ಮುನೀರ ಬೊಮ್ಮನಹಳ್ಳಿ, ಮಾಲಗತ್ತಿ, ನಡಕೂರ ಐತಿಹಾಸಿಕ ಮಹತ್ವದ ಗ್ರಾಮಗಳಾಗಿದ್ದು, ಅಲ್ಲಿಯ ದೇವಾಲಯ, ಶಾಸನಗಳ ಅಧ್ಯಯನ ಮಾಡಬೇಕಿದೆ’ ಎಂದು ಹೇಳಿದರು.

ಉಪನ್ಯಾಸಕ ಮಲ್ಲಣ್ಣ ಬಿಳೆಭಾವಿ ಮಾತಾನಾಡಿ, ‘ಇತಿಹಾಸದಿಂದ ಬದುಕಿನಲ್ಲಿ ಪ್ರೇರಣೆ ಸಿಗುತ್ತದೆ’ ಎಂದರು. ಪಾರ್ವತಿ ಬಾಪುಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷ ವಿಶ್ವನಾಥರಡ್ಡಿ ಮತ್ತು ವಿದ್ಯಾರ್ಥಿಗಳು ಇದ್ದರು. ಉಪನ್ಯಾಸಕ ಮೋಹನರಡ್ಡಿ ದೇಸಾಯಿ ನಿರೂಪಿಸಿದರು. ರಮೇಶ ಸ್ವಾಗತಿಸಿದರು. ನಂತರ ರಮೇಶ ಟಣಿಕೆದಾರ ಅವರು ಸಂಗ್ರಹಿಸಿದ ನ್ಯಾಣಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT