‘ಸೂಪರ್ ಸ್ಟಾರ್‌’ನ ರಿಯಲ್ ಗಾಯಕಿ!

ಗುರುವಾರ , ಜೂನ್ 20, 2019
31 °C

‘ಸೂಪರ್ ಸ್ಟಾರ್‌’ನ ರಿಯಲ್ ಗಾಯಕಿ!

Published:
Updated:
‘ಸೂಪರ್ ಸ್ಟಾರ್‌’ನ ರಿಯಲ್ ಗಾಯಕಿ!

ಬಾಲಿವುಡ್‌ನಲ್ಲಿ ಸದ್ಯಕ್ಕೀಗ ‘ಸಿಕ್ರೇಟ್ ಸೂಪರ್‌ಸ್ಟಾರ್‌’ನದ್ದೇ ಹವಾ. ದೀಪಾವಳಿಯಂದು (ಅಕ್ಟೋಬರ್ 19) ಬಿಡುಗಡೆಯಾಗಲಿರುವ ಈ ಸಿನಿಮಾದಲ್ಲಿ ಪುಟ್ಟ ಗಾಯಕಿಯಾಗಿ ಝೈರಾ ವಾಸಿಂ ಕಾಣಿಸಿಕೊಂಡಿದ್ದಾರೆ. 16ರ ಹರೆಯ ಝೈರಾಗೆ ಹಾಡಿರುವ ಗಾಯಕಿ ಮೇಘನಾ ಮಿಶ್ರಾಗೂ 16ರ ಹರೆಯವೇ.

ಟೀನೇಜರ್ ಗಾಯಕಿ ಪಾತ್ರಕ್ಕೆ ಹಾಡಲು ಅದ್ಭುತ ಕಂಠಸಿರಿ ಹೊಂದಿರುವ ಗಾಯಕಿ ಹುಡುಕಾಟದಲ್ಲಿದ್ದ ಅಮೀರ್‌ಗೆ ಅದೇ ವಯಸ್ಸಿನ ಮೇಘನಾ ಕಣ್ಣಿಗೆ ಬಿದ್ದರು. ಹಾಗೆ ನೋಡಿದರೆ ಮೇಘನಾ ತಮ್ಮ ಹತ್ತನೇ ವಯಸ್ಸಿನಲ್ಲೇ ಖ್ಯಾತನಾಮರ ಮತ್ತು ಸಂಗೀತಪ್ರಿಯರ ಮನಗೆದ್ದವರು. ರಿಯಾಲಿಟಿ ಷೋ ಒಂದರಲ್ಲಿ ಹಾಡಲು ಹೋದಾಗ ಮೇಘನಾಳ ಧ್ವನಿಯನ್ನು ತಿರಸ್ಕರಿಸಲಾಗಿತ್ತಂತೆ. ಆದರೆ, ಛಲ ಬಿಡದ ಮೇಘನಾ ತನ್ನ ಸಂಗೀತಾಭ್ಯಾಸವನ್ನು ಮುಂದುವರಿಸಿದ್ದಳು. ಅಮೀರ್ ತಮ್ಮ ‘ಸಿಕ್ರೇಟ್ ಸೂಪರ್‌ಸ್ಟಾರ್’ ಸಿನಿಮಾಕ್ಕಾಗಿ ಒಟ್ಟು 28 ಗಾಯಕಿಯರ ಆಡಿಷನ್ ನಡೆಸಿದ್ದರು. ಅದರಲ್ಲಿ ಮೇಘನಾ ಮಾತ್ರ ಆಯ್ಕೆಯಾಗಿದ್ದಳು.

ಮೇಘನಾಳ ತಂದೆ ಸಂಜಯ್ ಮಿಶ್ರಾ ಕೂಡಾ ಗಾಯಕ. ತಾಯಿ ಆರತಿ ಮಿಶ್ರಾ ತಬಲಾ ವಾದಕಿ ಮತ್ತು ನೃತ್ಯಪಟು. ಬಾಲ್ಯದಲ್ಲಿ ಸಂಗೀತ–ನೃತ್ಯ ಪರಿಸರದಲ್ಲಿ ಬೆಳೆದ ಮೇಘನಾ ಈಗ ’ಸಿಕ್ರೇಟ್ ಸೂಪರ್‌ಸ್ಟಾರ್’ ಮೂಲಕ ಬಾಲಿವುಡ್ ಸಂಗೀತ ಜಗತ್ತಿಗೆ ಕಾಲಿಟ್ಟಿದ್ದಾರೆ. ಈ ಸಿನಿಮಾದಲ್ಲಿ ಇರುವ ಒಟ್ಟು ಐದು ಹಾಡುಗಳಲ್ಲಿ ನಾಲ್ಕು ಹಾಡುಗಳನ್ನು ಮೇಘನಾ ಅವರೇ ಹಾಡಿರುವುದು ವಿಶೇಷ.

’ಮೈ ಕೌನ್ ಹೂಂ’, ‘ಮೇರಿ ಪ್ಯಾರಿ ಅಮ್ಮಿ’, ‘ಸಪ್ನೆ ರೇ’, ‘ನಚ್ಡಿ ಫಿರಾ’ ಹಾಡುಗಳ ಮೂಲಕ ಈಗಾಗಲೇ ಮೇಘನಾ ಸಂಗೀತಪ್ರಿಯರ ಮನಗೆದ್ದಿದ್ದಾಳೆ. ಒಂದರ್ಥದಲ್ಲಿ ‘ಸಿಕ್ರೇಟ್ ಸೂಪರ್‌ಸ್ಟಾರ್‌’ನ ನಿಜವಾದ ಸೂಪರ್ ಸ್ಟಾರ್ ಆಗಿ ಗಾಯಕಿ ಮೇಘನಾ ಹೊರಹೊಮ್ಮಿದ್ದಾಳೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry