34 ಕೆಎಎಸ್‌ ಅಧಿಕಾರಿಗಳಿಗೆ ಐಎಎಸ್‌ಗೆ ಬಡ್ತಿ ‘ಭಾಗ್ಯ’

ಶುಕ್ರವಾರ, ಮೇ 24, 2019
28 °C

34 ಕೆಎಎಸ್‌ ಅಧಿಕಾರಿಗಳಿಗೆ ಐಎಎಸ್‌ಗೆ ಬಡ್ತಿ ‘ಭಾಗ್ಯ’

Published:
Updated:

ನವದೆಹಲಿ: ಕರ್ನಾಟಕ ಆಡಳಿತ ಸೇವೆಯ (ಕೆಎಎಸ್‌) 34 ಅಧಿಕಾರಿಗಳಿಗೆ ಭಾರತೀಯ ಆಡಳಿತ ಸೇವೆಗೆ (ಐಎಎಸ್‌) ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಬಡ್ತಿ ನೀಡಲಿದೆ.

ನವದೆಹಲಿಯಲ್ಲಿ ಸೋಮವಾರ ಯುಪಿಎಸ್‌ಸಿ ಸದಸ್ಯರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷಚಂದ್ರ ಕುಂಟಿಆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿ ಟಿ.ಕೆ. ಅನಿಲಕುಮಾರ್‌ ಭಾಗವಹಿಸಿ ಅರ್ಹ ಅಧಿಕಾರಿಗಳ ಪಟ್ಟಿ ನೀಡಿ ಚರ್ಚಿಸಿದರು.

56 ಜನ ಕೆಎಸ್‌ಎಸ್‌ ಅಧಿಕಾರಿಗಳ ಪಟ್ಟಿಯನ್ನು ಅನುಮೋದನೆಗಾಗಿ ನೀಡಲಾಗಿದೆ. ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಆ ಪೈಕಿ 34 ಅಧಿಕಾರಿಗಳಿಗೆ ಬಡ್ತಿ ದೊರೆಯಲಿದೆ ಎಂದು ಸುಭಾಷಚಂದ್ರ ಕುಂಟಿಆ ಸಭೆಯ ನಂತರ ‘ಪ್ರಜಾವಾಣಿ’ಗೆ ತಿಳಿಸಿದರು.

ಯುಪಿಎಸ್‌ಸಿ ಸದಸ್ಯರ ಸಮಿತಿಯು ಬಡ್ತಿ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಿದ್ದು, ಬಡ್ತಿ ಹೊಂದಲಿರುವ ಅಧಿಕಾರಿಗಳ ಪಟ್ಟಿಯನ್ನು ರಾಜ್ಯ ಸರ್ಕಾರಕ್ಕೆ ನೀಡಲಿದೆ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry