ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಮೆಟ್ರೊ ಪ್ರಯಾಣ ದರ ಹೆಚ್ಚಳ

Last Updated 10 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ : ದೆಹಲಿ ಮೆಟ್ರೊ ಪ್ರಯಾಣ ದರ ಹೆಚ್ಚಳವಾಗಿದ್ದು, ಮಂಗಳವಾರದಿಂದಲೇ ಪರಿಷ್ಕೃತ ದರ ಜಾರಿಗೆ ಬಂದಿದೆ. 5.ಕಿ.ಮೀ. ಗಿಂತ ಹೆಚ್ಚು
ದೂರ ಪ್ರಯಾಣಿಸುವುದಾದರೆ ₹10 ಹೆಚ್ಚುವರಿ ದರ ಪಾವತಿಸಬೇಕಾಗುತ್ತದೆ. 2–5 ಕಿ.ಮೀ. ಅಂತರದ ಪ್ರಯಾಣಕ್ಕೆ ₹5 ಹೆಚ್ಚುವರಿ ದರ ಪಾವತಿಸಬೇಕು.

ಪರಿಷ್ಕೃತ ದರ‍ಪಟ್ಟಿ ಪ್ರಕಾರ, 2ಕಿಮೀ ಗೆ ₹ 10 , 2ರಿಂದ 5ಕಿ.ಮೀ– ₹20, 5ರಿಂದ 12ಕಿ.ಮೀ– ₹ 30, 12ರಿಂದ 21ಕಿ.ಮೀ– ₹40, 21ರಿಂದ 32ಕಿ.ಮೀ– ₹50 ಮತ್ತು 32ಕಿ.ಮೀ ಪ್ರಯಾಣಕ್ಕೆ ₹ 60 ಪಾವತಿ ಮಾಡಬೇಕಾಗುತ್ತದೆ.

ಡಿಎಂಆರ್‌ಸಿ ಅಂದಾಜಿನ ಅನುಸಾರ, ಮೆಟ್ರೊದ ಒಟ್ಟು ಪ್ರಯಾಣಿಕರ ಪೈಕಿ ಶೇಕಡಾ 70 ಸ್ಮಾರ್ಟ್ ಕಾರ್ಡ್ ಬಳಕೆದಾರರು ಇದ್ದಾರೆ. ಇವರು ಪ್ರತಿ ಪ್ರಯಾಣದಲ್ಲೂ ಶೇಕಡ 10 ರಿಯಾಯಿತಿ ಪಡೆಯಬಹುದಾಗಿದೆ. ಜನ ದಟ್ಟಣೆಯಿರದ ಅವಧಿಗಳಲ್ಲಿ ಪ್ರಯಾಣಿಸುವಾಗ ಹೆಚ್ಚುವರಿಯಾಗಿ ಶೇಕಡ 10  ರಿಯಾಯಿತಿ ಪಡೆಯಬಹುದು.

ಐದು ತಿಂಗಳ ಹಿಂದೆಯಷ್ಟೇ ದೆಹಲಿ ಮೆಟ್ರೊ ಪ್ರಯಾಣ ದರವನ್ನು ಹೆಚ್ಚಳ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT